ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ನಿವೃತ್ತ ಐಎಎಸ್ ಅಧಿಕಾರಿ ಗ್ರಾಮ ವಾಸ್ತವ್ಯ

ಶಿಡ್ಲಘಟ್ಟದಲ್ಲಿ ಕಸಾಪದಿಂದ ವಿನೂತನ ಕಾರ್ಯಕ್ರಮ; ಶಾಲೆ, ಗ್ರಾಮ ಪಂಚಾಯಿತಿಗೆ ಭೇಟಿ
Last Updated 17 ಮಾರ್ಚ್ 2021, 3:14 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಶಿಡ್ಲಘಟ್ಟ ಕಸಾಪ ವತಿಯಿಂದ ವಿನೂತನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಿವೃತ್ತ ಐಎಎಸ್ ಅಧಿಕಾರಿ ಸುಗಟೂರು ಅಮರನಾರಾಯಣ ಅವರನ್ನು ಗ್ರಾಮಗಳ ಪರಿವೀಕ್ಷಣೆ ಹಾಗೂ ಗ್ರಾಮ ವಾಸ್ತವ್ಯ ನಡೆಸಿದರು.

ಮೇಲೂರು ಗ್ರಾಮ ಪಂಚಾಯಿತಿಗೆ ಕಸಾಪ ಸದಸ್ಯರೊಂದಿಗೆ ಭೇಟಿ ನೀಡಿದ ಅವರು, ನಲಿಕಲಿ ವಿಭಾಗದಲ್ಲಿನ ಸೇವೆಗಾಗಿ ಪ್ರಶಸ್ತಿ ಪಡೆದಿರುವಶಿಕ್ಷಕಿ ತನುಜಾಕ್ಷಿ ಅವರನ್ನು ಸನ್ಮಾಸಿಸಿದರು.

‘ಪ್ರತಿಯೊಬ್ಬರೂ ಹಸಿಕಸ ಒಣಕಸ ಬೇರ್ಪಡಿಸಿ, ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ, ಸ್ವಚ್ಛ ಭಾರತ ಕನಸು ನನಸಾಗಲಿದೆ. ದೇಶದ ಅಭಿವೃದ್ಧಿಗೆ ಗ್ರಾಮ ಹಾಗೂ ಗ್ರಾಮ ಪಂಚಾಯಿತಿಗಳ ಯೋಗದಾನ ಮಹತ್ತರವಾದುದು. ಸ್ವಚ್ಛತೆ ಆರೋಗ್ಯಕ್ಕೆ ಮೂಲ ಸೂತ್ರ. ನೆಲ ಜಲ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ರೈತರು ಪ್ರತಿ ಎಕರೆಗೆ ಇಂಗು ಗುಂಡಿ ಹಾಗೂ ಹಣ್ಣು ನೀಡುವ ಮರಗಿಡಗಳನ್ನು ನೆಟ್ಟಲ್ಲಿ ಈ ಬಯಲು ಸೀಮೆಯ ನದಿ ನಾಲೆ ಇಲ್ಲದ ಈ ಭಾಗಕ್ಕೆ ವರದಾನವಾಗಲಿದೆ’ ಅಮರನಾರಾಯಣ ಹೇಳಿದರು.

ಗ್ರಾ.ಪಂ. ಅಧ್ಯಕ್ಷಆರ್.ಎ.ಉಮೇಶ್,ಪಿಡಿಒಶಾರದಾ,ಸದಸ್ಯರಾದಎಂ.ಕೆ.ರವಿಪ್ರಸಾದ್,ಎಂ.ಜೆ.ಶ್ರೀನಿವಾಸ್, ನಾರಾಯಣಸ್ವಾಮಿ, ಮುಖಂಡರಾದ ಮುನಿಶಾಮಪ್ಪ, ರಾಮಾಂಜಿನಪ್ಪ, ತಿರುಮಳೇಶ್, ರೂಪೇಶ್, ಗಂಗಾದರಪ್ಪ,ಸುಧೀರ್, ಧರ್ಮೇಂದ್ರಕುಮಾರ್ ಹಾಜರಿದ್ದರು.

ಸರ್ಕಾರಿ ಶಾಲೆಗೆ ಭೇಟಿ: ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಮಕ್ಕಳೊಂದಿಗೆ ಮಾತನಾಡಿ, ಅಲ್ಲಿನ ವರ್ಣರಂಜಿತವಾದ ಶಾಲಾ ಕಟ್ಟಡ, ಆವರಣದಲ್ಲಿನ ಬ್ಯಾಸ್ಕೆಟ್ ಬಾಲ್ ಕೋರ್ಟ್, ಅಂಗನವಾಡಿ ಕಟ್ಟಡಗಳ ಅಂದಚಂದವನ್ನು ಮೆಚ್ಚಿ, ಮಕ್ಕಳೊಂದಿಗೆ ಮಾತನಾಡಿ, ಕನ್ನಡ ಚೆನ್ನಾಗಿ ಕಲಿಯಿರಿ, ಕನ್ನಡಕ್ಕೆ ಆದ್ಯತೆನೀಡಿ, ಹುಟ್ಟಿದ ಹಳ್ಳಿಯನ್ನು ಮರೆಯದಿರಿ ಎಂದರು. ಶಾಲಾ ಆವರಣದಲ್ಲಿ ಮಕ್ಕಳ ಜತೆಗೂಡಿ ಸಸಿ ನೆಟ್ಟರು.

ಪಂಚಾಯಿತಿಗೆ ಭೇಟಿ: ಆನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಂವಾದಿಸಿದರು. ಗ್ರಾಮಾಭಿವೃದ್ಧಿಗೆ ಕೈಗೊಂಡ ಯೋಜನೆಗಳ ಬಗ್ಗೆ ಕೇಳಿ ಮಾಹಿತಿ ಪಡೆದು ಸಲಹೆಗಳನ್ನು ನೀಡಿದರು. ಆನೂರು ಗ್ರಾಮದ ವರ್ಣಮಯವಾದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಆವರಣದಲ್ಲಿ ಗಿಡವನ್ನು ನೆಟ್ಟರು.

ರೈತರೊಂದಿಗೆ ಸಂವಾದ: ಬೋದಗೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಹೂಳೆತ್ತಿರುವ ಕೆರೆಯ ಅಂಗಳದಲ್ಲಿ ರೈತರೊಂದಿಗೆ ಅವರು ಸಂವಾದಿಸಿದರು.

‘ನಮ್ಮ ಮುಂದಿನ ಪೀಳಿಗೆಗೆ ನಾವು ನೀರನ್ನು ಉಳಿಸಬೇಕಾದರೆ, ಕುಂಟೆ, ಕಲ್ಯಾಣಿ, ಬಾವಿ ಇವುಗಳಿಗೆಲ್ಲ ನೀರು ಬರಬೇಕಾದಲ್ಲಿ ಕೆರೆ ಸಂರಕ್ಷಣೆ ಮುಖ್ಯ. ನೀರು ಪವಿತ್ರವಾದುದು. ಅದನ್ನು ನಮ್ಮಿಂದ ತಯಾರು ಮಾಡಲಾಗುವುದಿಲ್ಲ. ಪ್ರಕೃತಿಯಿಂದಲೇ ಅದು ಸಿಗಬೇಕು. ಎಚ್.ಎನ್.ವ್ಯಾಲಿ ನೀರು ಈ ಬಾಗದ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿದ್ದು, ಮೂರು ಹಂತದ ಶುದ್ಧೀಕರಿಸಿದ ನೀರು ಬಿಡಬೇಕು. ಇಲ್ಲವಾದಲ್ಲಿ ಮಾರಕ ಕಾಯಿಲೆಗಳಿಗೆ ಬುನಾದಿ’ ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ‘ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದ ವತಿಯಿಂದ ‘ನಾಡು ನುಡಿ ಸಂಭ್ರಮ 150’ನೇ ಕಾರ್ಯಕ್ರಮದ ಸವಿನೆನಪಿಗಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು ತಮ್ಮ ಅನುಭವದಿಂದ ಮಾರ್ಗದರ್ಶನ ಮಾಡಲು ಬಂದಿದ್ದಾರೆ’ ಎಂದರು.

ರಾಜ್ಯ ರೈತಸಂಘ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಬಿ.ವಸಂತ್, ಪ್ರಕಾಶ್ ಕುಮಾರ್, ಸಂತೋಷ್, ಮಾರಪ್ಪ, ಬೋದಗೂರು ವೆಂಕಟಸ್ವಾಮಿರೆಡ್ಡಿ, ರೈತ ಸಂಘ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಹಿತ್ತಲಹಳ್ಳಿ ಗೋಪಾಲಗೌಡ, ಎಚ್.ಕೆ.ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT