ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು: ಗಡಿಯಲ್ಲಿ ಅಭಿವೃದ್ಧಿಯತ್ತ ಶಾಲೆ

ಶಿಕ್ಷಕರ ಶ್ರಮ, ಪೋಷಕರ ಸಂತಸ
Last Updated 5 ಮಾರ್ಚ್ 2021, 3:08 IST
ಅಕ್ಷರ ಗಾತ್ರ

ಚೇಳೂರು: ಗಡಿ ಭಾಗದ ಕನ್ನಡ ಶಾಲೆಗಳ ಉಳಿವಿಗಾಗಿ ಸರ್ಕಾರ ಅನೇಕ ಸವಲತ್ತುಗಳು ಒದಗಿಸುತ್ತಿದೆ. ಇದರ ಬಳಕೆಯಿಂದ ಚಾಕವೇಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಪಡೆದುಕೊಂಡಿದೆ. ಅದರ ಜೊತೆಗೆ ತನ್ನ ದಾಖಲಾತಿಯಲ್ಲೂ ಹೆಚ್ಚಳ ಕಂಡುಕೊಂಡಿದೆ.

ಹಳೆಯದಾದ ಚಾಕವೇಲು ಸರ್ಕಾರಿ ಶಾಲೆಯ ಕೊಠಡಿಗಳನ್ನು ಹೊಸದಾಗಿ ನಿರ್ಮಿಸಲು ತಾ.ಪಂ.ಸದಸ್ಯ ಕೆ.ಆರ್.ಸುಧಾಕರರೆಡ್ಡಿ ₹20 ಸಾವಿರ ಹಾಗೂ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ವಿ.ವೆಂಕತರವಣ ₹40 ಸಾವಿರ ಹಣ ನೀಡಿದ್ದಾರೆ. ಇದರ ಜೊತೆಗೆ ನರೇಗಾ ಉದ್ಯೋಗ ಖಾತ್ರಿಯ ಅನುದಾನವನ್ನು ಬಳಸಿಕೊಂಡು ಶಾಲೆಯ ಕಟ್ಟಡವನ್ನು ನಿರ್ಮಿಸಲಾಗಿದೆ.

ಶಾಲೆಯ ಇಂತಹ ಅಭಿವೃದ್ಧಿಗೆ ಕಾರಣರಾದ ಶಿಕ್ಷಕರ ಬಗ್ಗೆ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಾಗುತ್ತಿದ್ದು, ಅತ್ಯಂತ ಜನಮನ್ನಣೆ ಪಡೆಯುತ್ತಿದೆ.

‘ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಮುಂದಾಗುತ್ತಿದೆ. ಮಕ್ಕಳಿಗೆ ಎಲ್ಲ ವಿಧದಲ್ಲೂ ಉಚಿತ ಬಟ್ಟೆ, ಪುಸ್ತಕಗಳನ್ನು ನೀಡಲಾಗುತ್ತಿದೆ. ಇತರೆ ಸಹಾಯ ಹಸ್ತ ಚಾಚುವುದರಿಂದ ಪೋಷಕರೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಬೋಧನೆಯ ಗುಣಮಟ್ಟವೂ ವೃದ್ಧಿಯಾಗುತ್ತಿದ್ದು, ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದಾರೆ’ ಚಾಕವೇಲು ಸರ್ಕಾರಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ವಿ.ವೆಂಕಟರವಣ ತಿಳಿಸಿದರು.

‘ಸರ್ಕಾರ ಚಾಕವೇಲು ಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರಾರಂಭ ಮಾಡಿರುವುದು ಬಡವರ ಮಕ್ಕಿಗೆ ಅತಿ ಹೆಚ್ಚು ಅನುಕೂಲವಾಗಿದೆ. ಈ ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ಈ ಶಾಲೆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಪೋಷಕರು ಹೊಂದಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತಷ್ಟು ಹೆಚ್ಚು ಮಕ್ಕಳು ಇಲ್ಲಿ ಸೇರಿಕೊಳ್ಳಲಿದ್ದಾರೆ’ ಎಂದು ಪೋಷಕರಾದ ಗಾಣಿಗರ ಅನಸೂಯಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT