ಶಿಡ್ಲಘಟ್ಟ: ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಆಡಳಿತಾವಧಿ ಶೀಘ್ರವೇ ಮುಕ್ತಾಯವಾಗಲಿದ್ದು, ಆಯಾ ಪಂಚಾಯಿತಿಗಳಿಗೆ ಆಡಳಿತಾಧಿಗಳ ನೇಮಕಕ್ಕೆ ಜಿಲ್ಲಾಧಿಕಾರಿ ಜಿ. ಪ್ರಭು ಆದೇಶ ಹೊರಡಿಸಿದ್ದಾರೆ.

ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿಯು ಕ್ರಮವಾಗಿ ಫೆಬ್ರುವರಿ 7, 8, 9 ಮತ್ತು 10ರಂದು ಕೊನೆಗೊಳ್ಳಲಿದೆ.

ಈ ಪಪ್ರಕಾರ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರ ಕುಮಾರ್, ವೈ. ಹುಣಸೇನಹಳ್ಳಿ ಗ್ರಾ.ಪಂ.ಗೆ ಸಿಡಿಪಿಒ ವಿದ್ಯಾ. ಎ. ವಸ್ತ್ರದ್, ದೇವರಮಳ್ಳೂರು ಗ್ರಾ.ಪಂ.ಗೆ ಬೆಸ್ಕಾಂ ಎಇಇ ಸೂರ್ಯಪ್ರಕಾಶ್, ಕೊತ್ತನೂರು ಗ್ರಾ.ಪಂ.ಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜಳುಳಾ. ಪಿ, ತುಮ್ಮನಹಳ್ಳಿ ಗ್ರಾ.ಪಂ.ಗೆ ನಗರಸಭೆ ಪೌರಾಯುಕ್ತೆ ಜಿ. ಅಮೃತಾ, ಆನೂರು ಗ್ರಾ.ಪಂ.ಗೆ ರಾಜೇಶ್ ಗವಾಲ್, ಹಂಡಿಗನಾಳ ಗ್ರಾ.ಪಂ.ಗೆ ತಹಶೀಲ್ದಾರ್ ಗಗನಸಿಂಧೂ.ಎನ್, ಮೇಲೂರು ಗ್ರಾ.ಪಂ.ಗೆ ಕೃಷಿ ಸಹಾಯಕ ನಿರ್ದೇಶಕ ರವಿ.ಪಿ.ಆರ್, ಮಳ್ಳೂರು ಗ್ರಾ.ಪಂ.ಗೆ ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ, ಜೆ.ವೆಂಕಟಾಪುರ ಹಾಗೂ ಕುಂಭಿಗಾನಹಳ್ಳಿ ಗ್ರಾ.ಪಂ.ಗಳಿಗೆ ತಾ.ಪಂ ಇಒ ಹೇಮಾವತಿ. ಆರ್, ಜಂಗಮಕೋಟೆ ಗ್ರಾ.ಪಂ.ಗೆ ಪಂಚಾಯತ್ರಾಜ್ ಇಲಾಖೆಯ ಎಡಿ ಪುರುಷೋತ್ತಮ ಕೆ.ಎನ್, ಚೀಮಂಗಲ ಗ್ರಾ.ಪಂ.ಗೆ ತಾ.ಪಂ ಯೋಜನಾಧಿಕಾರಿ ಅನಿಲ್ಕುಮಾರ್, ದೊಡ್ಡತೇಕಹಳ್ಳಿ ಗ್ರಾ.ಪಂ.ಗೆ ತಾ.ಪಂ ಯೋಜನಾಧಿಕಾರಿ ಅನಿಲ್ ಕುಮಾರ್, ಬಶೆಟ್ಟಹಳ್ಳಿ ಮತ್ತು ದಿಬ್ಬೂರಹಳ್ಳಿ ಗ್ರಾ.ಪಂ.ಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಎಡಿ ಜಗದೀಶ್. ಎಚ್, ತಿಮ್ಮನಾಯಕನಹಳ್ಳಿ ಗ್ರಾ.ಪಂ.ಗೆ ಗ್ರಾಮೀಣ ಕುಡಿಯುವ ನೀರು ಮತ್ತೂ ನೈರ್ಮಲ್ಯ ಇಲಾಖೆಯ ಎಡಿ ಮೋಹನ್ ಕೃಷ್ಣ.ವಿ, ಗಂಜಿಗುಂಟೆ ಗ್ರಾ.ಪಂ.ಗೆ ಬಿಸಿಎಂ ಇಲಾಖೆಯ ಎಡಿ ನವೀನ್ ಕುಮಾರ್ ಎಚ್.ಬಿ, ಈ ತಿಮ್ಮಸಂದ್ರ ಗ್ರಾ.ಪಂ.ಗೆ ಲೋಕೋಪಯೋಗಿ ಇಲಾಖೆಯ ಎಡಿ ಶ್ರೀನಿವಾಸ್, ಸಾದಲಿ ಗ್ರಾ.ಪಂ.ಗೆ ತಾ.ಪಂ ನರೇಗಾ ಎಡಿ ಚಂದ್ರಪ್ಪ.ಎಂ, ಎಸ್.ದೇವಗಾನಹಳ್ಳಿ ಗ್ರಾ.ಪಂ ತಾ.ಪಂ ನರೇಗಾ ಎಡಿ ಚಂದ್ರಪ್ಪ.ಎಂ, ಪಲಿಚೇರ್ಲು ಗ್ರಾ.ಪಂ ಬೆಸ್ಕಾಂ ಗ್ರಾಮಾಂತರ ಎಇಇ ಪ್ರಭು.ವಿ, ಕುಂದಲಗುರ್ಕಿ ಗ್ರಾ.ಪಂ.ಗೆ ಸರ್ವೇ ಇಲಾಖೆಯ ಎಡಿ.ಎಲ್.ಆರ್. ಬಿ.ಜಯಪ್ಪ, ತಲಕಾಯಲಬೆಟ್ಟ ಗ್ರಾ.ಪಂ ರೇಷ್ಮೆ ಗೂಡು ಮಾರುಕಟ್ಟೆಯ ಡಿಡಿ ಎನ್.ಉಮೇಶ್ ಅವರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಲಾಗಿದೆ.

2026–31ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಆಗುವವರೆಗೆ ಮೇಲಿನ ಅಧಿಕಾರಿಗಳು ಆಡಳಿತಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.