ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಯವಾಗುತ್ತಿದೆ ಭಜನಾ ಸೊಗಡು

ಫಂಡರಿ ಭಜನೆ, ಕೋಲಾಟ ದೂರ
Published : 29 ಆಗಸ್ಟ್ 2024, 6:57 IST
Last Updated : 29 ಆಗಸ್ಟ್ 2024, 6:57 IST
ಫಾಲೋ ಮಾಡಿ
Comments

ಚಿಂತಾಮಣಿ: ಶ್ರಾವಣಮಾಸ ಬಂದರೆ ಹಬ್ಬಗಳ ಋತು ಆರಂಭವಾಗುತ್ತದೆ. ಶ್ರಾವಣ ಮಾಸದಲ್ಲಿ ಶನಿವಾರಗಳಂದು ಎಲ್ಲ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತವೆ.

ಪೂರ್ವಿಕರು ಶ್ರಾವಣಮಾಸದಲ್ಲಿ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಪ್ರತಿ ಗ್ರಾಮ ದೇವಸ್ಥಾನದಲ್ಲೂ ಭಕ್ತಿಭಾವ ಮೂಡಿಸುತ್ತಿದ್ದ ಭಜನೆ ಆಧುನಿಕ ಜಾಗತೀಕರಣ ಯುಗದಲ್ಲಿ ಮಾಯವಾಗುತ್ತಿದೆ.

ಸಮವಸ್ತ್ರಧಾರಿಗಳಾಗಿ ಕೈಯಲ್ಲಿ ತಾಳ, ತಂಬೂರಿ ಹಿಡಿದು ಭಜನೆ ಮಾಡುತ್ತಾ ಗುಂಪು ಗುಂಪುಗಳಾಗಿ ಪಾದಯಾತ್ರೆಯ ಮೂಲಕ ದೇವಸ್ಥಾನಗಳಿಗೆ ತೆರಳುತ್ತಿದ್ದರು. ಕೈವಾರಕ್ಕೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಭಾಗಗಳಿಂದ ಭಜನಾತಂಡಗಳು ಬರುತ್ತಿದ್ದವು. ಇತ್ತೀಚೆಗೆ ಭಜನಾ ತಂಡಗಳ ಸಂಖ್ಯೆ ವಿರಳವಾಗುತ್ತಿವೆ.

ಕೈವಾರಕ್ಕೆ ಸಮವಸ್ತ್ರಧಾರಿಗಳು ಭಜನೆಯೊಂದಿಗೆ ಜನರ ಗಮನ ಸೆಳೆಯುತ್ತಾ ಪಾದಯಾತ್ರೆಯ ಮೂಲಕ ಬರುತ್ತಿದ್ದರೆ, ದಾರಿಯುದ್ದಕ್ಕೂ ಜನರು ಇಕ್ಕೆಲಗಳಲ್ಲಿ ನಿಂತು ಭಜನಾ ತಂಡಗಳನ್ನು ಸ್ವಾಗತಿಸುತ್ತಿದ್ದರು.

ಆಧುನಿಕತೆಯ ಭರಾಟೆಯಲ್ಲಿ ಭಕ್ತಿಯ ಕಲೆ, ಸಂಸ್ಕೃತಿ ನಿಧಾನವಾಗಿ ಮರೆಯಾಗುತ್ತಿದೆ. ಫಂಡರಿ ಭಜನೆ, ಕೋಲಾಟವೂ ಸಹ ದೂರ ಸರಿಯುತ್ತಿವೆ ಎನ್ನುತ್ತಾರೆ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ಬಾಲಕೃಷ್ಣ ಭಾಗವತರ್.

ಭಜನಾ ಕಲೆಯನ್ನು ಜೀವಂತಗೊಳಿಸಲು ಕೈವಾರ ಕ್ಷೇತ್ರದ ಎಂ.ಆರ್.ಜಯರಾಂ ನೇತೃತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಭಾಗದ ಗ್ರಾಮಗಳಲ್ಲಿ ಸಾವಿರಾರು ಭಜನಾ ತಂಡ ರಚಿಸಲಾಗಿದೆ. ಭಜನಾ ತಂಡ ಪ್ರತಿವಾರ ಒಂದೊಂದು ಹಳ್ಳಿಗೆ ಭೇಟಿ ನೀಡಿ, ಗ್ರಾಮದ ಬೀದಿಗಳಲ್ಲಿ ಭಜನೆ ಮಾಡುತ್ತಾ ಪಾದಯಾತ್ರೆ ಮಾಡುತ್ತಾರೆ.

ಭಜನೆ ಗ್ರಾಮೀಣ ಜನರ, ಸಮುದಾಯದ ನಡುವೆ ಸಾಮರಸ್ಯ ಮೂಡಿಸುತ್ತಿತ್ತು. ಗ್ರಾಮೀಣ ಕಲೆಗಳು ಮರೆಯಾಗುತ್ತಿರುವುದರಿಂದ ವಿವಿಧ ಸಮುದಾಯಗಳು ಪರಸ್ಪರ ಬೆರೆಯದೆ ಸಮಾಜದಲ್ಲಿ ಅಶಾಂತಿಯ ವಾತಾವರಣ ಮೂಡುತ್ತಿದೆ ಎಂದು ಪ್ರವಚನಕಾರ ಆನಂದ್ ಹೇಳಿದರು.

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯುವಜನರ ನಿರಾಸಕ್ತಿಯಿಂದ ಹಾಗೂ ಮೊಬೈಲ್ ಭರಾಟೆಯಲ್ಲಿ ಭಕ್ತಿ, ಭಜನೆ, ಜಾನಪದ ಕಲೆ ಮರೆಯಾಗುತ್ತಿರುವುದು ದುರಂತ. ಭಜನಾ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎನ್ನುತ್ತಾರೆ ಜಾನಪದ ಕಲಾವಿದೆ ಲೀಲಾಲಕ್ಷ್ಮಿನಾರಾಯಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT