ಶಿಡ್ಲಘಟ್ಟ: ನಗರದ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ವಸದಸ್ಯರ ಸಭೆ ಹಾಗೂ ನೂತನ ನಿರ್ದೇಶಕರ ಪದಗ್ರಹಣ ಸಮಾರಂಭವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ‘ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಕ್ಕುಗಳ ರಕ್ಷಣೆ, ಆರೋಗ್ಯ ಸಂಜೀವಿನಿಯಂತಹ ಕಾರ್ಯಕ್ರಮಗಳ ಮೂಲಕ ಆರೋಗ್ಯ ಸೌಲಭ್ಯಗಳ ವಿಸ್ತರಣೆ, ವೇತನ ತಿದ್ದುಪಡಿ ಮತ್ತು ಹೆಚ್ಚಳದಂತಹ ಅನೇಕ ನೌಕರಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ನೌಕರರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ’ ಎಂದು ಹೇಳಿದರು.

ನೌಕರರು ಮತ್ತು ಅವಲಂಬಿತರಿಗೆ ಆರೋಗ್ಯ ಸಂಜೀವಿನಿ, ಸ್ಯಾಲರಿ ಅಕೌಂಟ್ ಮೂಲಕ ಸಾಲಸೌಲಭ್ಯ ಒದಗಿಸುವುದು, ವಿಮಾ ಸೌಲಭ್ಯ, ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮತ್ತು ಋತುಚಕ್ರ ರಜೆ ಸೌಲಭ್ಯಗಳಂತಹ ಯೋಜನೆಗಳು ಎಲ್ಲಾ ಸರ್ಕಾರಿ ನೌಕರರಿಗೆ ಉಪಯುಕ್ತವಾಗಿವೆ ಎಂದರು.

ಶಾಸಕರ ಸಹಕಾರಕ್ಕೆ ಧನ್ಯವಾದ: ತಾಲ್ಲೂಕಿನಲ್ಲಿ ನನೆಗುದಿಗೆ ಬಿದ್ದ ಗುರುಭವನ ಮತ್ತು ಸರ್ಕಾರಿ ನೌಕರರ ಭವನ ನಿರ್ಮಾಣ ಕಾಮಗಾರಿಯನ್ನು 2026ರ ವೇಳೆಗೆ ಪೂರ್ಣಗೊಳಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ನೌಕರರ ಭವನದ 3ನೇ ಮಹಡಿ ಮತ್ತು ಗುರುಭವನ ನಿರ್ಮಾಣಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಸಹಕಾರ ನೀಡಬೇಕು ಎಂದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿದರು.

ನೌಕರರ ಸಂಘದ ಖಜಾಂಚಿ ವಸಂತಕುಮಾರ್ ಅವರು ಆಯವ್ಯಯ ಮಂಡಿಸಿ ಅನುಮೋದನೆ ಪಡೆದರು. ಸಂಘ ಸುಮಾರು ₹5 ಲಕ್ಷ ಉಳಿತಾಯ ಮಾಡಿರುವುದಾಗಿ ಪ್ರಕಟಿಸಿದರು.

ಕಾರ್ಯದರ್ಶಿ ಕೆಂಪೇಗೌಡ, ರಾಜ್ಯಪರಿಷತ್ ಸದಸ್ಯ ಟಿ.ಟಿ.ನರಸಿಂಹಪ್ಪ, ಎಚ್.ಎಸ್.ರುದ್ರೇಶಮೂರ್ತಿ, ನಾರಾಯಣಸ್ವಾಮಿ, ಸರಸ್ವತಮ್ಮ, ಮಂಜುನಾಥ್, ದೇವರಾಜು, ಶ್ರೀನಾಥ್ರೆಡ್ಡಿ, ಎನ್.ಮೂರ್ತಿ ಮಾತನಾಡಿದರು.

ವಿವಿಧ ಕಾರಣಗಳಿಂದ ತೆರವಾದ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಹೊಸಬರನ್ನು ಆಯ್ಕೆಮಾಡಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.