ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ| ಅಥ್ಲೆಟಿಕ್ ಕ್ರೀಡಾಕೂಟ ; ಕೆಜಿಎಫ್ ತಂಡಕ್ಕೆ ಚಾಂಪಿಯನ್ ಪಟ್ಟ

Published 14 ಆಗಸ್ಟ್ 2023, 15:31 IST
Last Updated 14 ಆಗಸ್ಟ್ 2023, 15:31 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಝಾನ್ಸಿರಾಣಿ ಲಕ್ಷ್ಮಿಬಾಯಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ 4ನೇ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟದ  ಬಾಲಕರ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ 71 ಅಂಕಗಳೊಂದಿಗೆ ಚಾಂಪಿಯನ್ ಪಟ್ಟಕ್ಕೆ ಭಾಜನವಾಗಿದೆ. ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 66 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಭಾಜನವಾಗಿದೆ. 

ಕ್ರೀಡಾಕೂಟದಲ್ಲಿ ಬೆಂಗಳೂರಿನ ಕಸ್ತೂರಿ ನಗರದ ನ್ಯೂ ಹಾರಿಜನ್ ಕಾಲೇಜಿನ ಜಗತ್ ಗೌಡ ಬೆಸ್ಟ್ ಅಥ್ಲೆಟಿಕ್ ಆಗಿ ಹೊರ ಹುಮ್ಮಿದ್ದಾರೆ.  

ಚಕ್ರ ಎಸೆತ, 400 ಮೀ ಹರ್ಡಲ್ಸ್, ಟ್ರಿಪಲ್ ಜಂಪ್, 800 ಮೀಟರ್ ಓಟ, 1,500 ಮೀಟರ್ ಓಟದ ಸ್ಪರ್ಧೆ, 5000 ಮೀಟರ್ ಓಟದ ಸ್ಪರ್ಧೆ, ಆಪ್ ಮ್ಯಾರಾಥಾನ್, ಉದ್ದ ಜಿಗಿತ, ಗುಂಡು ಎಸೆತ, ಜಾವಲಿನ್ ಥ್ರೋ ಹೀಗೆ ನಾನಾ ಸ್ಪರ್ಧೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT