ಪ್ರಜಾವಾಣಿ ವಾರ್ತೆ

ಬಾಗೇಪಲ್ಲಿ: 2024-25ನೇ ಸಾಲಿನ ಎಸ್ಎಸ್ಎಲ್ಸಿ 1, 2 ಹಾಗೂ 3 ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ. ಜಿಲ್ಲೆಯ ಪೈಕಿ ಮೂರು ಪರೀಕ್ಷೆಗಳ ಫಲಿತಾಂಶಗಳ ಒಟ್ಟಾರೆಯಾಗಿ ಬಾಗೇಪಲ್ಲಿ ತಾಲ್ಲೂಕು ಶೇ 88.60ರಷ್ಟು ಫಲಿತಾಂಶ ಪಡೆದು ಪ್ರಥಮಸ್ಥಾನ ಸಾಧಿಸಿದೆ.

ಜಿಲ್ಲೆಯಲ್ಲಿ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ 2254 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದರು. ಪರೀಕ್ಷೆ ಒಂದರಲ್ಲಿ 1437, ಪರೀಕ್ಷೆ 2ರಲ್ಲಿ 343 ಹಾಗೂ ಪರೀಕ್ಷೆ 3ರಲ್ಲಿ 217 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 88.60ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.

ಚಿಂತಾಮಣಿ ತಾಲ್ಲೂಕಿನಲ್ಲಿ 3434 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದರು. ಮೂರು ಪರೀಕ್ಷೆಗಳಲ್ಲಿ 3013 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 87.74 ಫಲಿತಾಂಶ ಪಡೆದು ದ್ವಿತೀಯ ಸ್ಥಾನ ಪಡೆದಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2530 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದರು. ಅದರಲ್ಲಿ 2067 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 81.70 ರಷ್ಟು ಫಲಿತಾಂಶ ಸಾಧಿಸಿ ಮೂರನೇ ಸ್ಥಾನ ಪಡೆದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 2704 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದರು. 2104 ಮಂದಿ ಉತ್ತೀರ್ಣರಾಗಿ ಶೇ 77.81 ರಷ್ಟು ಫಲಿತಾಂಶ ಸಾಧಿಸಿ 4ನೇ ಸ್ಥಾನ ಪಡೆದಿದೆ.

ಗುಡಿಬಂಡೆ ತಾಲ್ಲೂಕಿನಲ್ಲಿ 651 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದರು. 440 ಮಂದಿ ಉತ್ತೀರ್ಣರಾಗಿ ಶೇ 67.59ರಷ್ಟು ಫಲಿತಾಂಶ ಸಾಧಿಸಿ 5ನೇ ಸ್ಥಾನ ಪಡೆದಿದೆ.

ಗೌರಿಬಿದನೂರು ತಾಲ್ಲೂಕಿನಲ್ಲಿ 3386 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದರು. 2182 ಮಂದಿ ಉತ್ತೀರ್ಣರಾಗಿ ಶೇ 64.44 ರಷ್ಟು ಫಲಿತಾಂಶ ಪಡೆದು 6ನೇ ಸ್ಥಾನದಲ್ಲಿ ಇದೆ.

ಬಾಗೇಪಲ್ಲಿ ತಾಲ್ಲೂಕಿನ ಎಸ್ಎಸ್ಎಲ್ಸಿಯ ಒಂದನೇ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶದ ಸಾಧಕ ಬಾಧಕಗಳನ್ನು ಕ್ಷೇತ್ರಶಿಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ವಿಷಯ ಶಿಕ್ಷಕರ ಜೊತೆ ಸಭೆ ಮಾಡಲಾಯಿತು. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ಯೋಜನೆ ರೂಪಿಸಲಾಯಿತು. ಮಾದರಿ ಪರೀಕ್ಷೆ ಬರೆಯಿಸಿ ಒಂದೊಂದು ಅಂಕ ಪಡೆಯುವ ಬಗ್ಗೆ ತಿಳಿಸಲಾಯಿತು ಎಂದು ಎಸ್ಎಸ್ಎಲ್ಸಿ ಪರೀಕ್ಷೆಯ ತಾಲ್ಲೂಕು ನೋಡಲ್ ಅಧಿಕಾರಿ ಪಿ.ಎನ್.ನಾರಾಯಣಸ್ವಾಮಿ ಮಾಹಿತಿ ನೀಡಿದರು.

ಮೊದಲ ಹಾಗೂ ಎರಡನೇ ಪರೀಕ್ಷೆಗಳಲ್ಲಿ ಒಂದು ವಿಷಯದಲ್ಲಿ 72 ಮಂದಿ ಹಾಗೂ ಎರಡು ವಿಷಯಗಳಲ್ಲಿ 111 ಮಂದಿ ಅನುತ್ತೀರ್ಣ ಆಗಿರುವ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಉತ್ತೀರ್ಣ ಆಗುವಂತೆ ಬೋಧನೆ ಮಾಡಲಾಗಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿತರಿಸಿದ ಮಾದರಿ ಪ್ರಶ್ನೆಪತ್ರಿಕೆಗೆ ಉತ್ತರ ಬರೆಸಲಾಗಿದೆ. ಇದು ಫಲಿತಾಂಶದ ಹೆಚ್ಚಳಕ್ಕೆ ಕಾರಣ ಆಗಿದೆ. ಬಾಗೇಪಲ್ಲಿ ತಾಲ್ಲೂಕು ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.