ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಗೋಪುರದ ಮೂರ್ತಿ ವಿರೂಪ

Last Updated 11 ಫೆಬ್ರುವರಿ 2021, 2:16 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಜೋಡಿ ರಸ್ತೆಯಲ್ಲಿರುವ ಸಂತೋಷಿಮಾತಾ ದೇವಾಲಯದ ಗೋಪುರದ ಮೇಲಿನ ಮೂರ್ತಿಗಳನ್ನು ಕಿಡಿಗೇಡಿಗಳು ಮಂಗಳವಾರ ರಾತ್ರಿ ವಿರೂಪಗೊಳಿಸಿದ್ದಾರೆ.

‘ದೇವಾಲಯದ ಗೋಪುರದ ಮೇಲಿನ ಗಣೇಶ ಮತ್ತು ಸಂತೋಷಿ ಮಾತಾ ಮೂರ್ತಿಯ ಕೈ ಹಾಗೂ ಗೋಪುರದ ಮೇಲಿನ ಕಳಶಗಳನ್ನು ಜಖಂಗೊಳಿಸಿದ್ದಾರೆ. ದೇವಾಲಯದಲ್ಲಿ ಕುಂಬಾಭಿಷೇಕ ಕಾರ್ಯಕ್ರಮವಿದ್ದು ಧರ್ಮದರ್ಶಿಗಳು ಕಳೆದ 2-3 ದಿನಗಳಿಂದ ಸಿದ್ಧತೆಗಳನ್ನು ನಡೆಸುತ್ತಿದ್ದೆವು. 2 ದಿನಗಳ ಹಿಂದೆ ಗೋಪುರದ ಮೇಲೆ ಹತ್ತಿ ಪರಿಶೀಲನೆ ನಡೆಸಲಾಗಿತ್ತು. ಬುಧವಾರ ವಿಗ್ರಹಗಳನ್ನು ಜಖಂಗೊಳಿಸಿರುವುದು ಕಂಡುಬಂದಿದೆ’ ಎಂದು ದೇವಾಲಯ ಆಡಳಿತ ಮಂಡಳಿಯ ವಾಣಿ ತಿಳಿಸಿದ್ದಾರೆ.

‘ದೇವಾಲಯದ ಗೇಟ್‌ಗೆ ಬೀಗ ಹಾಕಿರುತ್ತದೆ. ಕಾವಲುಗಾರನು ಇದ್ದಾರೆ. ದೇವಾಲಯದ ಆವರಣದ ಗೋಡೆಯ ಮೇಲಿಂದ ಒಳಗಡೆ ಹೋಗಿದ್ದಾರೆ. ಒಳಗಡೆಯಿಂದ ಗೋಪುರದ ಮೇಲೆ ಹತ್ತಲು ಮೆಟ್ಟಿಲುಗಳಿವೆ. ಅನಾಮಧೇಯರು ಮೆಟ್ಟಿಲುಗಳ ಮೇಲೆ ಹೋಗಿ ಜಖಂಗೊಳಿಸಿರಬಹುದು’ ಎಂದು ಅವರು ತಿಳಿಸಿದರು. ಈ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT