ಶ್ರದ್ಧಾಂಜಲಿ ಸಲ್ಲಿಕೆ

ಚಿಂತಾಮಣಿ: ನಗರದ ವಾಸವಿ ವೃದ್ಧಾಶ್ರಮದಲ್ಲಿ ಇತ್ತೀಚೆಗೆ ನಿಧನರಾದ ಕವಿ ಭೋಜರಾಜ ಅವರ ಶ್ರದ್ಧಾಂಜಲಿ ಸಭೆಯನ್ನು ಶಿಲ್ಪ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಾಸವಿ ವೃದ್ಧಾಶ್ರಮದ ವ್ಯವಸ್ಥಾಪಕ ಕೆ.ಆರ್. ನರಸಿಂಹಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎನ್. ಮುನಿಕೃಷ್ಣಪ್ಪ, ಕೆ.ಎನ್. ಅಕ್ರಂಪಾಷಾ, ಎಸ್.ಎಫ್.ಎಸ್. ಸುರೇಶ್ ಮಾತನಾಡಿ, ಭೋಜರಾಜ ಅವರ ಸರಳತೆ, ನಡೆ-ನುಡಿ, ವ್ಯಕ್ತಿತ್ವ ಹಾಗೂ ಸಾಹಿತ್ಯ ಸೇವೆಯನ್ನು ಸ್ಮರಿಸಿದರು.
ಭೋಜರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಭಕ್ತಿಗೀತೆಗಳನ್ನು ಹಾಡುವುದರ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಶಾಲೆಯ ಮುಖ್ಯಶಿಕ್ಷಕಿ ಭಾಗ್ಯಮ್ಮ, ಸಹಶಿಕ್ಷಕಿ ಮಂಜು ಭಾರ್ಗವಿ, ವೃದ್ಧಾಶ್ರಮದ ನಿರ್ವಾಹಕಿ ಜೆ.ಕೆ. ನಿರ್ಮಲಾ, ಕವಿಗಳಾದ ಎಚ್.ಎಸ್. ಅಶೋಕ್, ಶಶಿಕುಮಾರ್, ಭಜನಾ ಮಂಡಳಿಯ ರುಕ್ಮಣಿಯಮ್ಮ, ಸರಸ್ವತಮ್ಮ ಹಾಜರಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.