ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಸ್ಪಂದನ: 400 ಅರ್ಜಿ ಸಲ್ಲಿಕೆ

Published : 18 ಸೆಪ್ಟೆಂಬರ್ 2024, 14:14 IST
Last Updated : 18 ಸೆಪ್ಟೆಂಬರ್ 2024, 14:14 IST
ಫಾಲೋ ಮಾಡಿ
Comments

ಮಿಟ್ಟೇಮರಿ(ಬಾಗೇಪಲ್ಲಿ): ತಾಲ್ಲೂಕಿನ ಪೈಪಾಳ್ಯ ಗ್ರಾಮದಲ್ಲಿ ತಾಲ್ಲೂಕು ಆಡಳಿತ, ಕಂದಾಯ ಇಲಾಖೆ, ಮಿಟ್ಟೇಮರಿ ಹಾಗೂ ಪೋಲನಾಯಕಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.

ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ಜೂಲಪಾಳ್ಯ, ಪೋಲನಾಯಕನಪಲ್ಲಿ ಗ್ರಾಮದ ಜನರು ಕಂದಾಯ, ಪೋಡಿ, ದರಖಾಸ್ತು, ಮನೆ, ನಿವೇಶನ, ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಬಸ್‌ಸೌಲಭ್ಯ, ಪಿಂಚಣಿ, ಪಡಿತರ ಚೀಟಿ, ಆಧಾರ್, ನಿಗಮಗಳಿಂದ ಸಾಲ ಸೌಲಭ್ಯ, ಕೊಳವೆಬಾವಿ ಕೊರೆಯಿಸುವುದು, ಬೆಳೆ ನಷ್ಟ ಪರಿಹಾರ, ವಿಮೆ, ವಿದ್ಯಾರ್ಥಿಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಹವಾಲು ಸಲ್ಲಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪಿಂಚಣಿ 300ಕ್ಕೂ ಅಧಿಕ ಮಂದಿಗೆ, 94ಸಿ ಹಕ್ಕು ಪತ್ರ 25 ಮಂದಿಗೆ, ಕಂದಾಯ ಗ್ರಾಮ ಹಕ್ಕು ಪತ್ರ 65, ಪೌತಿ ಖಾತೆ 20, ಮಳೆಯಿಂದ ಮನೆ ಹಾನಿಯಾದವರಿಗೆ ತಲಾ 1, 20 ಸಾವಿರ, 21 ಗ್ರಾಮಗಳಿಗೆ ಸ್ಮಶಾನ ಭೂ ಮಂಜೂರಾತಿ, ಸಾಗುವಳಿ ಚೀಟಿಯಂತೆ ಖಾತೆ 3 ಮಂದಿಗೆ, ಆಕಸ್ಮಿಕ ಮರಣ ಹೊಂದಿದವರಿಗೆ ಹಾಗೂ ಬಣವೆ ನಷ್ಟ ಹೋಂದಿದವರಿಗೆ ತಲಾ ₹2 ಲಕ್ಷದಂತೆ ಚೆಕ್ ವಿತರಣೆ ಮಾಡಲಾಯಿತು.

ತಾಲ್ಲೂಕು ಪಂಚಾಯಿತಿ ಸಂಬಂಧಿಸಿದಂತೆ ಜಾಬ್ ಚೀಟಿ 50 ಮಂದಿಗೆ, ನರೇಗಾ ಕೆಲಸ ಕೂಲಿ ₹ 30 ಲಕ್ಷ, ಎನ್‍ಆರ್‌ಎಲ್‌ಎಂ ಚೆಕ್ ಜೂಲಪಾಳ್ಯ ಗ್ರಾಮ ಪಂಚಾಯಿತಿಗೆ ₹ 9 ಲಕ್ಷ, ಪೋಲನಾಯಕಪಲ್ಲಿ ಗ್ರಾಮ ಪಂಚಾಯಿತಿಗೆ ₹ 5 ಲಕ್ಷದ ಚೆಕ್, 25 ಅರ್ಹ ಫಲಾನುಭವಿಗಳಿಗೆ ಮನೆ ಯೋಜನೆ, 21 ಗ್ರಾಮಕ್ಕೆ ಸ್ಮಶಾನಕ್ಕೆ ಜಾಗ ಮಂಜೂರು ಮಾಡಲಾಯಿತು.

ಗಂಗಾ ಕಲ್ಯಾಣ ಯೋಜನೆಯಡಿ 5 ಫಲಾನುಭವಿಗಳಿಗೆ ಮಂಜೂರಾತಿ ಪತ್ರ, ಇಎಸ್‍ಐ ಚೀಟಿ, 40ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಉಚಿತ ಕೂಟಿ ಫಲಾನುಭವಿಗಳಿಗೆ ಆರ್‌ಆರ್, ಟಿಪ್ಪಣಿ, ಆಕಾರಬಂದ್, ಪಹಣಿ, ಮ್ಯುಟೇಷನ್, ಅಂಗವಿಕಲರಿಗೆ 2 ವೀಲ್‌ಚೇರ್ ವಿತರಿಸಲಾಯಿತು.

30 ಮಂದಿಗೆ ಪಡಿತರ ಚೀಟಿ, 200 ಮಂದಿಗೆ ಆರೋಗ್ಯ ಚೀಟಿ, 25 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು.

10 ಗರ್ಭಿಣಿಯರಿಗೆ ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಆಹಾರ ಶಾಖೆಯ ಅಧಿಕಾರಿ ಪುಷ್ಪ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಅರಿಶಿಣ, ಕುಂಕುಮ ಹಚ್ಚಿ, ಸೀರೆ, ತಾಂಬೂಲ ನೀಡಿ ಸೀಮಂತ ಮಾಡಿಸಿದರು.

ಶಿಶು ಕಲ್ಯಾಣ ಯೋಜನಾಧಿಕಾರಿ ರಾಮಚಂದ್ರ ನೇತೃತ್ವದಲ್ಲಿ ಪೋಷಣ್ ಅಭಿಯಾನದಡಿಯಲ್ಲಿ ಪೌಷ್ಟಿಕ ಆಹಾರ, ತರಕಾರಿ, ಸಿರಿಧಾನ್ಯಗಳು, ಹೂವು, ಹಣ್ಣು, ಸೊಪ್ಪುಗಳ ಪ್ರದರ್ಶನ ಮಾಡಿದರು. ಆರೋಗ್ಯ ಇಲಾಖೆಯಲ್ಲಿ ಸ್ವಚ್ಛತೆ, ಮಲೇರಿಯಾ, ಡೆಂಗೆ, ಸೊಳ್ಳೆಗಳ ನಿಯಂತ್ರಣ ಸೇರಿದಂತೆ ಆರೋಗ್ಯ ಜಾಗೃತಿ ಮೂಡಿಸುವ ಕರಪತ್ರ ಹಂಚಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಕ್ಷೇತ್ರದಲ್ಲಿ ಪಂಚಾಯಿತಿವಾರು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಪಂಚಾಯಿತಿವಾರು ತಿಂಗಳ ಮೊದಲೇ, ಆಯಾಯ ಗ್ರಾಮಗಳಿಗೆ ಅಧಿಕಾರಿ, ಸಿಬ್ಬಂದಿ ಭೇಟಿ ಮಾಡಬೇಕು. 400 ಅರ್ಜಿ ಸಲ್ಲಿಕೆ ಆಗಿವೆ. 1,150ಕ್ಕೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸಲಾಗಿದೆ ಎಂದರು.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಮಂಜುನಾಥರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT