ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ | ಮಕ್ಕಳಿಂದ ಶೌಚಾಲಯ ಸ್ವಚ್ಛ: ವಿಡಿಯೊ ಮಾಡಿದ ವ್ಯಕ್ತಿ ಮೇಲೆ ಹಲ್ಲೆ

Published 30 ಜನವರಿ 2024, 15:51 IST
Last Updated 30 ಜನವರಿ 2024, 15:51 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಕುದುಪಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೊ ಸೆರೆ ಹಿಡಿದ ವ್ಯಕ್ತಿ ಮೇಲೆ ಪೋಷಕರು ಮಂಗಳವಾರ ಹಲ್ಲೆ ಮಾಡಿದ್ದಾರೆ. 

ವಿಡಿಯೊ ಮಾಡಿದ್ದು ತಾನೇ ಎಂದು ಹೇಳಿಕೊಂಡಿದ್ದ ಬಯ್ಯಪ್ಪನಹಳ್ಳಿ ವಿಜಯ ಕುಮಾರ್ ಮೇಲೆ ಕುದುಪಕುಂಟೆ ಕೆಲವು ಪೋಷಕರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ವಿಜಯ್ ಕುಮಾರ್ ದೂರು ನೀಡಿದ್ದಾರೆ.

ಬಿಇಒ ನರೇಂದ್ರಕುಮಾರ್ ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಸಮಿತಿ ಸದಸ್ಯ ಲಕ್ಷ್ಮಣರಾಜು ಮಂಗಳವಾರ ಕುದುಪಕುಂಟೆ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಶಾಲೆಗೆ ಬಂದಿದ್ದ ವಿಜಯ್ ಕುಮಾರ್ ಮತ್ತು ಅವರಣದಲ್ಲಿದ್ದ ಕೆಲ ಪೋಷಕರ ನಡುವೆ ಮಾತಿನ ಚಕಮಕಿ ನಡೆದಿದೆ.

‘ನಮ್ಮೂರ ಶಾಲೆಯಲ್ಲಿ ನಿಮಗೇನು ಕೆಲಸ. ನಮ್ಮೂರಿನ ಶಾಲೆಯ ಹೆಸರು ಕೆಡಿಸಲು ಬಂದಿದ್ದೀಯಾ, ಮಕ್ಕಳು ಶೌಚಾಲಯ ಸ್ವಚ್ಛ ಮಾಡುವಾಗ ನೀನೇಕೆ ವಿಡಿಯೊ ಮಾಡಿದೆ’ ಎಂದು ಪೋಷಕರು ಅವರನ್ನು ಪ್ರಶ್ನಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT