ಗುಡಿಬಂಡೆ: ಗುಡಿಬಂಡೆ– ಗೌರಿಬಿದನೂರು ರಸ್ತೆಯ ಕಣಿವೆಯಲ್ಲಿ ಎರಡು ಬೈಕ್ಗಳು ಭಾನುವಾರ ಮುಖಮುಖಿ ಡಿಕ್ಕಿ ಹೊಡೆದು ಬೈಕ್ ಸವಾರನ ಕಾಲು ಮುರಿದಿದ್ದು, ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಲುಮುರಿದು ಸವಾರ ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕಿನ ಮೈದಗೋಲಂ ನಿವಾಸಿ ಮೂರ್ತಿ (28) ಹಾಗೂ ಬಳ್ಳಾರಿ ಮೂಲದವಾಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ರುತ್ವಿಕ್ (26) ಎಂದು ಗುರುತಿಸಲಾಗಿದೆ.

ಮೂರ್ತಿ ಅವರು ಕೆಲಸಕ್ಕೆ ತಮ್ಮ ಸ್ವಗ್ರಾಮದಿಂದ ಗುಡಿಬಂಡೆ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಬೈಕ್ನಲ್ಲಿ ಹೋಗುತ್ತಿದ್ದರು. ಬೆಂಗಳೂರು ಕಡೆಯಿಂದ ವಾಟದಹೊಸಹಳ್ಳಿ ಕೆರೆ ವೀಕ್ಷಣೆಗೆ ಬೈಕ್ನಲ್ಲಿ ಪ್ರವಾಸಕ್ಕೆ ತೆರಳಿದ್ದ ರುತ್ವಿಕ್ ಅವರ ಬೈಕ್ಗಳು ಕಣಿವೆಯ ತಿರುವಿನಲ್ಲಿ ಡಿಕ್ಕಿಯಾಗಿವೆ.

ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.