ಸಮತೋಲನದ ಬಜೆಟ್

ಕೇಂದ್ರ ಬಜೆಟ್ 2026–27ನೇ ಸಾಲಿನ ಹಣಕಾಸಿನ ದಾಖಲೆಯಲ್ಲ. ಇದು ರೈತರು, ಯುವಕರು, ಉದ್ಯಮಿಗಳು ಮತ್ತು ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ರಾಷ್ಟ್ರೀಯ ಧ್ಯೇಯಕ್ಕೆ ಜೋಡಿಸುವ ಕಾರ್ಯತಂತ್ರ. ನಿಜವಾದ ವಿಕಸಿತ ಭಾರತದತ್ತ ಭಾರತದ ಪ್ರಯಾಣವನ್ನು ವೇಗಗೊಳಿಸುವ ನಿಟ್ಟಿನಲ್ಲಿ ಜನ ಕೇಂದ್ರಿತ ಮತ್ತು ಬೆಳವಣಿಗೆ ಆಧಾರಿತ ಬಜೆಟ್.

ಈ ಬಜೆಟ್ ಆರ್ಥಿಕ ಶಿಸ್ತು, ಸಾಮಾಜಿಕ ಸಮಾನತೆ ಮತ್ತು ಅಭಿವೃದ್ಧಿಯ ಅಪರೂಪದ ಸಮತೋಲನವಾಗಿದೆ. ಇದು ಭಾರತದ ದೀರ್ಘಕಾಲೀನ ಬದಲಾವಣೆಗೆ ಸಮಗ್ರ ನೀಲನಕ್ಷೆ ನೀಡುತ್ತದೆ. ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವುದು, ನಾಗರಿಕರ ನಿರೀಕ್ಷೆಗಳನ್ನು ಪೂರೈಸುವುದು ಮತ್ತು ಎಲ್ಲರಿಗೂ ಸಂಪನ್ಮೂಲ ಸಿಗುವಂತೆ ಮಾಡುವ ಮೂರು ಕರ್ತವ್ಯಗಳನ್ನು ಇಲ್ಲಿ ಹೇಳಲಾಗಿದೆ. ಜವಾಬ್ದಾರಿಯುತ ಮತ್ತು ಸುಧಾರಣೆಯ ಆಡಳಿತದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ಈ ಬಜೆಟ್ ಪ್ರದರ್ಶಿಸುತ್ತದೆ.

ವಿಶೇಷವಾಗಿ ಹೈದರಾಬಾದ್-ಬೆಂಗಳೂರು ಕಾರಿಡಾರ್, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಬೆಳವಣಿಗೆ, ಸರಕು ಸಾಗಣೆ, ವ್ಯಾಪಾರ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುವ ಹೆಬ್ಬಾಗಿಲಾಗಿದೆ. ಕರ್ನಾಟಕವನ್ನು ಪ್ರಮುಖ ಆರ್ಥಿಕ ಎಂಜಿನ್ ಆಗಿ ಬಲಪಡಿಸಲು ಇದು ಸಹಕಾರಿ.

ಈ ಬಜೆಟ್ ರೈತರು ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ರಾಷ್ಟ್ರೀಯ ಅಭಿವೃದ್ಧಿಯ ಹೃದಯಭಾಗದಲ್ಲಿ ಇರಿಸಿದೆ, ಬಹುಭಾಷಾ ಎಐ ಆಧಾರಿತ ಭಾರತ್ ವಿಸ್ತಾರ್ ಯೋಜನೆ, ರೈತ ಉತ್ಪಾದಕ ಸಂಸ್ಥೆಗಳಿಗೆ ಬೆಂಬಲ, ಕ್ರೆಡಿಟ್ ಲಿಂಕ್ಡ್ ಜಾನುವಾರು ಅಭಿವೃದ್ಧಿ, 500 ಜಲಮೂಲಗಳ ಸೃಷ್ಟಿ ಮತ್ತು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಮಿಷನ್ ಕ್ರಮಗಳು ಗ್ರಾಮೀಣ ಆದಾಯ ಹೆಚ್ಚಿಸಲಿದೆ. ಸುಸ್ಥಿರತೆ ಹೆಚ್ಚಿಸುವ ಉದ್ದೇಶವನ್ನು ಇದು ಹೊಂದಿದೆ. ಇದು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶದ ಕೃಷಿ ಆರ್ಥಿಕತೆಗೆ, ವಿಶೇಷವಾಗಿ ತೋಟಗಾರಿಕೆ, ಡೇರಿ, ರೇಷ್ಮೆ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಡಾ.ಕೆ.ಸುಧಾಕರ್, ಸಂಸದ

ಕೃಷ್ಣಾ ನದಿ ನೀರಿನ ಪ್ರಸ್ತಾಪವಿಲ್ಲ

ಚಿಕ್ಕಬಳ್ಳಾಪುರದಲ್ಲಿ 2024ರ ಲೋಕಸಭಾ ಚುನಾವಣೆಯ ಪ್ರಚಾರದ ವೇದಿಕೆಯಲ್ಲಿ ಮಾಜಿ ಮತ್ತು ಹಾಲಿ ಪ್ರಧಾನ ಮಂತ್ರಿಗಳಾದ ದೇವೇಗೌಡರು ಹಾಗೂ ನರೇಂದ್ರ ಮೋದಿ ಅವರು ಬರಪೀಡಿತ ಜಿಲ್ಲೆಗಳಿಗೆ ಸುರಕ್ಷಿತವಾದ ಶಾಶ್ವತ ಶುದ್ಧ ಕುಡಿಯುವ ಕೃಷ್ಣಾ ನದಿಯ ನೀರನ್ನು ಹರಿಸುವ ವಾಗ್ದಾನ ನೀಡಿದ್ದರು. ಆದರೆ ಬಜೆಟ್ ಘೋಷಣೆಯ ವೇಳೆ ಇದನ್ನು ಮರೆತಿದ್ದಾರೆ. ಪೆನ್ನಾರ್ ಮತ್ತು ಅದರ ಉಪನದಿಗಳ ಪ್ರದೇಶದಲ್ಲಿರುವ ಕೆರೆಗಳಿಗೆ ಕರ್ನಾಟಕ ಸರ್ಕಾರವು ಹರಿಸುತ್ತಿರುವ ಬೆಂಗಳೂರಿನ ತ್ಯಾಜ್ಯ ನೀರನ್ನು ಹಿಂದಿನ ಕೇಂದ್ರ ಸರ್ಕಾರವೇ ರೂಪಿಸಿರುವ ಮಾನದಂಡಗಳಿಗೆ ಅನುಸಾರವಾಗಿ ಮೂರನೇ ಹಂತದ ಶುದ್ಧೀಕರಣಕ್ಕೆ ಅಗತ್ಯವಾದ ಅನುದಾನವನ್ನು ನೀಡುವ ನಿರೀಕ್ಷೆಯೂ ಹುಸಿ ಆಗಿದೆ. ಮುಂದೆ ಜಲಾಗ್ರಹ ಜನಾಂದೋಲನದಿಂದಲೇ ನೀರಿನ ನ್ಯಾಯ ಪಡೆದುಕೊಳ್ಳಬೇಕಾಗಿದೆ.

ಆಂಜನೇಯ ರೆಡ್ಡಿ ಆರ್., ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.