ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕಾಗಿ ಎಚ್‌ಡಿಕೆ ಯಾರ ಕಾಲನ್ನಾದರೂ ಹಿಡಿಯುತ್ತಾರೆ: ವೀರಪ್ಪ ಮೊಯಿಲಿ

ಜೆಡಿಎಸ್‌ ಸ್ನೇಹದಿಂದ ಯಾರೂ ಉದ್ಧಾರ ಆಗಲ್ಲ: ಮೊಯಿಲಿ
Published 28 ಜನವರಿ 2024, 14:16 IST
Last Updated 28 ಜನವರಿ 2024, 14:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: 'ಯಾರ ಕಾಲು ಹಿಡಿದರೂ ಪರವಾಗಿಲ್ಲ. ಮತ್ತೆ ಮುಖ್ಯಮಂತ್ರಿ ಆಗಬೇಕು ಇಲ್ಲವೇ ಕೇಂದ್ರ ಸಚಿವನಾಗಬೇಕು ಎನ್ನುವುದು ಎಚ್‌.ಡಿ.ಕುಮಾರಸ್ವಾಮಿ ಅವರ ಮನಸ್ಥಿತಿ’ ಎಂದು ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯಿಲಿ ಟೀಕಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ನಾಯಕತ್ವದ ಗುಣ ಇತ್ತು. ಆದರೆ ಅವರ ನಿಲುವುಗಳು ಅವರ ವ್ಯಕ್ತಿತ್ವ ಮತ್ತು ವರ್ಚಸ್ಸು ಕಳೆಯುತ್ತಿವೆ ಎಂದು ವಿಶ್ಲೇಷಿಸಿದರು.

‘ನನ್ನ ರಾಜಕೀಯ ಅನುಭವದ ಪ್ರಕಾರ ಜೆಡಿಎಸ್‌ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೋ ಅವರಿಗೆ ಸುಖ ಇಲ್ಲ. ಅವರ ಸ್ನೇಹದಿಂದ ಮತ್ತೆ ಗುಂಡಿಗೆ ಹೋಗುತ್ತೇವೆಯೇ ಹೊರತು ಉದ್ಧಾರ ಆಗುವುದಿಲ್ಲ. ಒಂದು ವೇಳೆ ಬಿಜೆಪಿ ಉದ್ಧಾರ ಆಗುವುದಿದ್ದರೆ ಆಗಲಿ’ ಎಂದರು.

ಕಾಂಗ್ರೆಸ್ ಹಾಗೂ ಮೈತ್ರಿಕೂಟವು ನಿತೀಶ್ ಕುಮಾರ್‌ ಅವರನ್ನು ನಂಬಿಕೊಂಡೇ ಇಲ್ಲ. ಅವರನ್ನು ನಂಬಿಕೊಂಡಿದ್ದರೆ ತಿಕ್ಕಾಟ ಆಗುತ್ತಿತ್ತು. ಮಮತಾ ಬ್ಯಾನರ್ಜಿ ಯಾವತ್ತೂ ಬಿಜೆಪಿ ಪರವಾಗಿ ಇಲ್ಲ. ಸದಾ ಬಿಜೆಪಿ ಪರವಾಗಿ ಇದ್ದ ನಿತೀಶ್ ಅವರದ್ದು ಅತಂತ್ರ ಮನಸ್ಥಿತಿ ಎಂದು ಮೊಯಿಲಿ ಟೀಕಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT