ಕಾಮಗಾರಿ ಪರಿಶೀಲಿಸಿದ ಶಾಸಕ ಸುಧಾಕರ್

7

ಕಾಮಗಾರಿ ಪರಿಶೀಲಿಸಿದ ಶಾಸಕ ಸುಧಾಕರ್

Published:
Updated:
Deccan Herald

ಚಿಕ್ಕಬಳ್ಳಾಪುರ: ನಗರದ ವಿವಿಧ ವಾರ್ಡ್‌ಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ನಿಧಿ ಹಾಗೂ ನಗರೋತ್ಥಾನ ಅನುದಾನಗಳಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಇತ್ತೀಚೆಗೆ ಶಾಸಕ ಡಾ.ಕೆ.ಸುಧಾಕರ್ ಅವರು ಪರಿಶೀಲಿಸಿದರು.

ಕಾಮಗಾರಿಗಳನ್ನು ಅಂದಾಜು ಪಟ್ಟಿಯ ಅಳತೆಯೊಂದಿಗೆ ಪರಿಶಿಲಿಸಿದ ಶಾಸಕರು ರಸ್ತೆಯ ಅಗಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ, ಕಾಮಗಾರಿಗಳ ನ್ಯೂನತೆಗಳ ಕುರಿತು ನಗರಸಭೆ ಆಯುಕ್ತರನ್ನು ಹಾಗೂ ಸಂಬಂಧಿಸಿದ ಇಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು.

20ನೇ ವಾರ್ಡಿನಲ್ಲಿ ಎಲ್‌ಐಸಿ ಕಚೇರಿ ಮುಂಭಾಗದ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿಕೊಂಡಿರುವ ಮನೆಯವರಿಗೆ ತಿಳಿ ಹೇಳಿದ ಶಾಸಕರು ‘ನಿಮಗೆ ನಗರದಲ್ಲಿ ಉಚಿತವಾಗಿ ನಿವೇಶನ ಒದಗಿಸಿ ಮನೆಯನ್ನು ನಿರ್ಮಿಸಿಕೊಡುತ್ತೇವೆ. ಕೂಡಲೇ ಮನೆಯನ್ನು ತೆರವುಗೊಳಿಸಿ ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಅವರು, ‘ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯಾಗುವುದಿಲ್ಲ. ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ಮಾಡಿದರೆ ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳೇ ನೇರ ಹೊಣೆ ಮಾಡಲಾಗುತ್ತದೆ. ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಿಂದ ನಿರ್ವಹಿಸಬೇಕು. ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಆಯುಕ್ತ ಉಮಾಕಾಂತ್, ಸದಸ್ಯರಾದ ಮಹಾಕಾಳಿ ಬಾಬು, ಸುಬ್ರಹ್ಮಣ್ಯಾಚಾರಿ, ಜಯಮ್ಮ, ಶ್ವೇತಾ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ಮುಖಂಡರಾದ ಪೆರಿಕಲ್ ಮಂಜು, ಅಪ್ಪಾಲು ಮಂಜು, ದೇ. ಸ ನಂಜಪ್ಪ, ಅಲಸೂರು ಮಂಜು, ಯತೀಶ್, ಶಶಿ, ಮೊಬೈಲ್ ಬಾಬು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !