ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪೀಳಿಗೆ ಹೋರಾಟವನ್ನು ನೆನಪಿಸಿಕೊಳ್ಳಬೇಕು: ಎನ್.ಎಚ್. ಶಿವಶಂಕರ ರೆಡ್ಡಿ

Last Updated 12 ಮಾರ್ಚ್ 2021, 8:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿದುರಾಶ್ವತ್ಥ ದೇಶದ ಗಮನ ಸೆಳೆದ ಸ್ಥಳ. ‌ಅಂದು ಇಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ 32 ಜನರು ಹುತಾತ್ಮರಾದರು. ಆದರೆ ಬ್ರಿಟಿಷ್ ಸರ್ಕಾರದ ದಾಖಲೆಯಲ್ಲಿ 9 ಜನರು ಮೃತರಾಗಿದ್ದಾರೆ ಎಂದು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು.

ಅಮೃತಮಹೋತ್ಸವದಲ್ಲಿ ಮಾತನಾಡಿದ ಅವರು, ಯುವ ಪೀಳಿಗೆ ಈ ಹೋರಾಟವನ್ನು ನೆನಪಿಸಿಕೊಳ್ಳಬೇಕು. ಅಂದಿನ ಅನೇಕ ಹೋರಾಟಗಾರರ ಚಳವಳಿಗೆ ಈ ನೆಲ ಸಾಕ್ಷಿಯಾಗಿತ್ತು.

ಇಂದು ಈ ಐತಿಹಾಸಿಕ ನೆಲೆಯಲ್ಲಿ ಅಮೃತ ಮಹೋತ್ಸವ ನಡೆಯುತ್ತಿರುವುದು ಮತ್ತೊಂದು ಐತಿಹಾಸಿಕ ವಿಚಾರ. ಈ ಸ್ಥಳವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಯೋಜನೆ ಸಿದ್ದವಾಗುತ್ತಿದೆ. ಆ ಯೋಜನೆ ಸುಮಾರು ₹16 ಕೋಟಿ ಆಗುತ್ತದೆ. ಇದಕ್ಕೆ ಮುಖ್ಯಮಂತ್ರಿ ಅವರು ಅನುಮೋದನೆ ನೀಡಬೇಕು ಎಂದು ಹೇಳಿದರು.

ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಹುಟ್ಟೂರು ಹೊಸೂರು ತಾಲ್ಲೂಕಿನಲ್ಲಿದೆ. ಇಲ್ಲಿ ಅವರ ಸ್ಮರಣಾರ್ಥ ಅಂತರ ರಾಷ್ಟ್ರೀಯ ವಿಜ್ಞಾನ ಕೇಂದ್ರ ಸ್ಥಾಪನೆಗೆ ₹10 ಕೋಟಿಯನ್ನು ಸರ್ಕಾರ ಬಜೆಟ್ ನಲ್ಲಿ ನೀಡಿದೆ. ಇದಕ್ಕೆ ಮುಖ್ಯಮಂತ್ರಿ ಅವರನ್ನು ಅಭಿನಂದಿಸುವೆ.

ನಮಗೆ ಆಸ್ಪತ್ರೆ ಸಹ ಮಂಜೂರಾಗಿದೆ.‌ ಇದಕ್ಕೆ ₹25 ಕೋಟಿ ನೀಡಬೇಕು ಎಂದು ಕೋರುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT