ಶನಿವಾರ, ಜನವರಿ 25, 2020
16 °C

ಲೈವ್ ವಿಡಿಯೊ ಮಾಡುತ್ತ ಯುವಕ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಜೀವನದಲ್ಲಿ ಜಿಗುಪ್ಸೆಗೊಂಡು ವೈಜಕೂರು ಗ್ರಾಮದ ಮಧು(23) ಎಂಬಾತ ಲೈವ್ ವೀಡಿಯೋ ಮಾಡುತ್ತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇತ ಅಶ್ವತ್ಥಪ್ಪ ಎಂಬುವವರ ಮಗ.

ವಿಷ ಕುಡಿದು ರಕ್ತವನ್ನು ವಾಂತಿ ಮಾಡಿಕೊಳ್ಳುತ್ತ ತಂದೆಗೆ ಕ್ಷಮೆ ಕೇಳುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನಾನು ಯಾವುದೇ ತಪ್ಪು ಮಾಡಿಲ್ಲ, ಜೀವನದ ಬೇಸರದಿಂದ ಸಾಯಲು ನಿರ್ಧರಿಸಿ ವಿಷ ಕುಡಿದಿದ್ದೇನೆ. ನನ್ನನ್ನು ಕ್ಷಮಿಸಿ, ತಾಯಿ ಮತ್ತು ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ವಿಡಿಯೊದಲ್ಲಿ ಕೇಳಿಕೊಂಡಿದ್ದಾನೆ.

ಸಂಬಂಧಿಕರು ನೀಡಿದ ದೂರಿನ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು