ಶಿಡ್ಲಘಟ್ಟ: ಬೃಹದಾಕಾರದ ಆಲದ ಮರಗಳು, ತಂಪನ್ನು ನೀಡುವ ಹೊಂಗೆ ಮರ, ಸಾಲಾಗಿ ಕಾಣಸಿಗುವ ಅಶೋಕ ವೃಕ್ಷಗಳು ಮೊದಲಾದ ಮರಗಳಿರುವ ಉದ್ಯಾನವನ ಎಲ್ಲ ಊರಿನಲ್ಲೂ ಇರುವುದಿಲ್ಲ. ಆದರೆ ಶಿಡ್ಲಘಟ್ಟದಲ್ಲಿ ಇವೆಲ್ಲಾ ಇದ್ದರೂ ಸೂಕ್ತ ನಿರ್ವಹಣೆಯೇ ಇಲ್ಲ.

ಪಟ್ಟಣ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ಪುರಸಭೆ ಪಂಪ್ಹೌಸ್ ಬಳಿ ಇರುವ ಉದ್ಯಾನವನ ಎಲ್ಲವೂ ಇದ್ದು ಏನೂ ಇಲ್ಲವಾದಂತಿದೆ. ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಮದ್ಯದ ಬಾಟಲಿಗಳು, ಮರಗಿಡಗಳ ಎಲೆಗಳು ರಾಶಿಯಾಗಿ ಬಿದ್ದಿದ್ದು ಈ ಉದ್ಯಾನವನದೊಳಗೆ ಕಾಲಿಡುವವರ ಸಂಖ್ಯೆ ದಿನಕಳೆದಂತೆ ಕ್ಷೀಣಿಸುತ್ತಿದೆ.

ಸುಮಾರು ಒಂದೂವರೆ ಎಕರೆಯಷ್ಟು ಜಾಗದಲ್ಲಿ ಮೊದಲೇ ವಿಶಾಲವಾಗಿ ಬೆಳೆದಿದ್ದ ಆಲದ ಮರಗಳನ್ನು ಸೇರಿಸಿಕೊಂಡು ನಿರ್ಮಿಸಿರುವ ಪುರಸಭೆಯ ಉದ್ಯಾನವನದಲ್ಲಿ ಗಣೇಶನ ದೇವಾಲಯ, ನೀರಿನ ಕೊಳ ಸೇರಿದಂತೆ ಮಕ್ಕಳು ಆಟವಾಡಲು ತೂಗು ಉಯ್ಯಾಲೆ, ಜಾರುಬಂಡೆ, ತಿರುಗುವ ಚಕ್ರ ಮುಂತಾದವುಗಳಿವೆ. ಚಿಕ್ಕದಾದರೂ ಚೊಕ್ಕದಾಗಿ ನಿರ್ಮಿಸಿರುವ ಉದ್ಯಾನವನ ಒಂದು ಕಾಲದಲ್ಲಿ ಶಿಡ್ಲಘಟ್ಟ ಪರಿಸರ ಪ್ರಿಯರ ನೆಚ್ಚಿನ ತಾಣವಾಗಿತ್ತು.

ನೂರಾರು ಬಾವಲಿಗಳು, ಗೊರವಂಕ, ಗಿಳಿ, ಕೋಗಿಲೆ, ಅಳಿಲುಗಳು, ಗುಟುರಗಳು ಮುಂತಾದ ಹಲವು ಹಕ್ಕಿಗಳು, ಮಂಗಗಳು ಮರಗಳನ್ನು ಆಶ್ರಯಿಸಿವೆ. ಉದ್ಯಾನವನದಲ್ಲಿ ಕುಳಿತರೆ ಹಕ್ಕಿಗಳ ಧ್ವನಿ ಕೇಳಬಹುದು. ಆದರೆ ಸೂಕ್ತ ವಾತಾವರಣ ಸೃಷ್ಟಿಸಬೇಕಿದೆ.

`ಉದ್ಯಾನವನದಲ್ಲಿ ಪರಿಸರ ಪ್ರಿಯರು ಸುತ್ತಾಡುವ ಬದಲು ಮದ್ಯಪಾನಪ್ರಿಯರು ಹೆಚ್ಚಾಗಿದ್ದಾರೆ. ಇಂಥ ಚಟುವಟಿಕೆಗೆ ಕಡಿವಾಣ ಹಾಕಬೇಕು. ಮರ್ಯಾದಸ್ಥರು ಆ ಪಾರ್ಕ್ನಲ್ಲಿ ಸುತ್ತಾಡಲು ಹಿಂಜರಿಯುತ್ತಾರೆ. ಮಕ್ಕಳಿಗೆ ರಜೆಯೆಂದು ಕರೆದುಕೊಂಡು ಬರಲು ಇಲ್ಲಿನ ಅನೈರ್ಮಲ್ಯತೆ ಬೇಸರ ತರಿಸುತ್ತದೆ. ಊರಿನಲ್ಲಿ ಇರುವ ಒಂದು ಉದ್ಯಾನವನವನ್ನೂ ಸರಿಯಾಗಿ ನೋಡಿಕೊಳ್ಳದಿದ್ದರೆ ಹೇಗೆ~ ಎಂದು ದೇಶದಪೇಟೆಯ ಜಗದೀಶ್ ಪ್ರಶ್ನಿಸುತ್ತಾರೆ.

`ಈ ಉದ್ಯಾನವನದ ನಿರ್ವಹಣೆ ಮಾಡಲು ಪುರಸಭೆಯು ಯಾರೊಬ್ಬರನ್ನು ನಿಯೋಜಿಸಿಲ್ಲ. ಕುಡುಕರು ತಿಂದು, ಕುಡಿದು ಬಿಸಾಡುವ ಬಾಟಲಿ, ತಿಂಡಿ, ತಿನಿಸು, ಪ್ಲಾಸ್ಟಿಕ್ ಕವರ್ಗಳ ವಿಲೇವಾರಿಯಾಗದೆ ಮದ್ಯದ ಖಾಲಿ ಬಾಟಲಿ, ಟೆಟ್ರಾ ಪ್ಯಾಕೆಟ್, ಪ್ಲಾಸ್ಟಿಕ್ ಕವರ್, ಒಣಗಿದ ಎಲೆ, ಕಸ ಕಡ್ಡಿಗಳ ರಾಶಿ ಕಾಣಿಸುತ್ತದೆ.

ಪುರಸಭೆಯಲ್ಲಿ ಉದ್ಯಾನದ ನಿರ್ವಹಣೆಗೆಂದು ಖರ್ಚು ಮಾತ್ರ ತೋರಿಸುತ್ತಾರೆ. ಕಸದ ರಾಶಿಯ ನಡುವೆ ಹೋಗಲು ಇಷ್ಟಪಡದೆ ವಾಕಿಂಗ್ ಹೋಗುವವರು ಇಲ್ಲಿಗೆ ಬರದಂತಾಗಿದೆ~ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.