ಚಿಂತಾಮಣಿ: ತಾಲ್ಲೂಕಿನಾದ್ಯಂತ ಕಳೆದ 10–15 ದಿನಗಳಿಂದ ಸುರಿಯುತ್ತಿರುವ ಅಲ್ಪ–ಸ್ವಲ್ಪ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಚುರುಕಾಗಿವೆ. ರೈತರು ಹೊಲ ಉಳುಮೆ ಮಾಡಿ ಭೂಮಿಯನ್ನು ಹದಗೊಳಿಸುವುದರಲ್ಲಿ ಮಗ್ನರಾಗಿದ್ದಾರೆ. ಕಳೆದ ಐದಾರು ವರ್ಷದಿಂದ ಸಮರ್ಪಕ ಮಳೆಯಾಗದೆ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಸಾಕಷ್ಟು ಮುಂಚೆಯೇ ಮಳೆಯಾಗುತ್ತಿರುವುದು ಸಂತಸ ತಂದಿದೆ.

ರೈತರು ನಗುಮುಖದಿಂದ ಬೆಳಗಿನಿಂದ ಸಂಜೆಯವರೆಗೂ ವಿವಿಧ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನ ವಾರ್ಷಿಕ ವಾಡಿಕೆ ಮಳೆ 778 ಮಿ.ಮೀ. ಜೂನ್ ತಿಂಗಳಲ್ಲಿ 198.3 ಮಿ.ಮೀ ವಾಡಿಕೆ ಮಳೆಯಾಗಬೇಕು. ಈವರೆಗೆ 262 ಮಿ.ಮೀ ಮಳೆಯಾಗಿದೆ.

ತಾಲ್ಲೂಕಿನಲ್ಲಿ ಕೃಷಿ ಇಲಾಖೆಯು ರೈತರ ಅಗತ್ಯಗಳನ್ನು ಪೂರೈಸಲು ಸಿದ್ಧತೆ ಮಾಡಿಕೊಂಡಿದೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೃಷಿ ಪರಿಕರಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ರೈತಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆಬೀಜ, ರಸಗೊಬ್ಬರವನ್ನು ಅಧಿಕಾರಿಗಳು ಒದಗಿಸುತ್ತಿದ್ದಾರೆ.

ಇಲಾಖೆಯ ಗುರಿ: ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ನಲ್ಲಿ ರಾಗಿ, 11 ಸಾವಿರ ಹೆಕ್ಟೇರ್ನಲ್ಲಿ ನೆಲಗಡಲೆ, 1800 ಹೆಕ್ಟೇರ್ನಲ್ಲಿ ಭತ್ತ, 4 ಸಾವಿರ ಹೆಕ್ಟೇರ್ನಲ್ಲಿ ಮುಸುಕಿನ ಜೋಳ, 2200 ಹೆಕ್ಟೇರ್ನಲ್ಲಿ ತೊಗರಿ, 400 ಹೆಕ್ಟೇರ್ನಲ್ಲಿ ಹಲಸಂದೆ, 1200 ಹೆಕ್ಟೇರ್ನಲ್ಲಿ ಅವರೆ ಹಾಗೂ ಇತರೆ ಬೆಳೆಗಳು ಸೇರಿ ಪ್ರಸಕ್ತ ಸಾಲಿನಲ್ಲಿ ಒಟ್ಟು 33120 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಯಬೇಕೆನ್ನುವ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿದೆ.

ದಾಸ್ತಾನು:  ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ 50 ಕಿಂಟಲ್ ಭತ್ತ, 138 ಕಿಂಟಲ್ ರಾಗಿ, 96 ಕಿಂಟಲ್ ಮುಸುಕಿನ ಜೋಳ, 40 ಕ್ವಿಂಟಲ್ ತೊಗರಿ, 20 ಕಿಂಟಲ್ ಹಲಸಂದೆ, 362 ಕ್ವಿಂಟಲ್ ನೆಲಗಡಲೆ ದಾಸ್ತಾನು ಮಾಡಲಾಗಿದೆ, ರಾಗಿ, ಅವರೆ ತಾಲ್ಲೂಕಿನ ಪ್ರಮುಖ ಬೆಳೆ. ಶೇಂಗಾ ಮತ್ತು ತೊಗರಿಯನ್ನು ಮೊದಲು ಬಿತ್ತನೆ ಮಾಡುತ್ತಾರೆ. ಈವರೆಗೆ 3800 ಹೆಕ್ಟೇರ್ನಲ್ಲಿ ನೆಲಗಡಲೆ, 600 ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆಯಾಗಿದೆ.

ಸಣ್ಣ ಹಾಗೂ ಅತಿಸಣ್ಣ ರೈತರು ಸೇರಿದಂತೆ ಪಹಣಿ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಸರ್ಕಾರ ನಿಗದಿಪಡಿಸಿರುವ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ವಿತರಿಸುತ್ತಿದೆ. ಒಂದು ಎಕರೆಗೆ 5 ಕೆ.ಜಿ.ರಾಗಿ, 5 ರಿಂದ 7 ಕೆ.ಜಿ.ಹಲಸಂದೆ, 60 ಕೆ.ಜಿ.ನೆಲಗಡಲೆ, 25 ಕೆ.ಜಿ. ಭತ್ತ ಹಾಗೂ 7 ಕೆಜಿ ತೊಗರಿಯನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತಾಲ್ಲೂಕಿನಲ್ಲಿ ಮೊದಲ ಬಾರಿ ಮೊಬೈಲ್ ಮೂಲಕ ಕಾಲಕಾಲಕ್ಕೆ ಕೃಷಿಗೆ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸಲು ತಂತ್ರಜ್ಞಾನವನ್ನು ರೂಪಿಸಲಾಗಿದೆ. ಸದ್ಯಕ್ಕೆ 5 ಸಾವಿರ ರೈತರಿಗೆ ಮಾಹಿತಿಯನ್ನು ನೀಡುತ್ತಿದೆ. ಎಲ್ಲ ರೈತರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಸದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿ ಚಟುವಟಿಕೆ ಚುರುಕು
ಚಿಕ್ಕಬಳ್ಳಾಪುರ: ಮುಂಗಾರು ವಾತಾವರಣ ಆವರಿಸಿಕೊಂಡು ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಆರಂಭಗೊಂಡಿದೆ. ಎತ್ತು, ಟ್ರ್ಯಾಕ್ಟರ್ಗಳ ಮೂಲಕ ರೈತರು ಉಳುಮೆ ಕಾರ್ಯ ಕೈಗೊಂಡಿದ್ದು ಜಮೀನು ಹದಗೊಳಿಸುತ್ತಿದ್ದಾರೆ. ವಿವಿಧ ಬೀಜಗಳ ಬಿತ್ತನೆ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಾಗೇಪಲ್ಲಿ, ಗೌರಿಬಿದನೂರು ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ರೈತರು ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆಯಲ್ಲಿ ತೊಡಗಿಕೊಂಡಿದ್ದು, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಶಿಡ್ಲಗಟ್ಟದ ರೈತರು ರಾಗಿ, ಮುಸುಕಿನ ಜೋಳ ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಉತ್ತಮ ಇಳುವರಿ ನಿರೀಕ್ಷೆಯೊಂದಿಗೆ ನೆಲಗಡಲೆ ಮತ್ತು ತೊಗರಿ ಬಿತ್ತನೆ ಶೀಘ್ರವೇ ಕೈಗೊಂಡ ರೈತರು ಉತ್ತಮ ಬೆಳೆಗೆ ತಕ್ಕಂತೆ ಮಳೆ ಆಶಿಸುತ್ತಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆಯುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಸಾಲು ಕಂಡು ಬರುತ್ತಿದೆ.

‘ಹವಾಮಾನ ಇಲಾಖೆಯವರು ಮತ್ತು ಕೃಷಿ ಇಲಾಖೆಯವರು ಈ ಬಾರಿ ಉತ್ತಮ ಮಳೆಯಾಗುವುದೆಂದು ಹೇಳುತ್ತಿದ್ದಾರೆ. ಅದರಂತೆಯೇ ನಾವು ಆಶಾಭಾವನೆ ಇಟ್ಟುಕೊಂಡಿದ್ದೇವೆ. ಅದಕ್ಕಾಗಿಯೇ ಜಮೀನು ಉಳುಮೆ ಮಾಡಿ ಹದಗೊಳಿಸುತ್ತಿದ್ದೇವೆ. ಟ್ರ್ಯಾಕ್ಟರ್ಗಿಂತ ಎತ್ತುಗಳಿಂದ ಉತ್ತಮ ಉಳುಮೆಯಾಗುತ್ತದೆ. ಅದಕ್ಕಾಗಿಯೇ ಅವುಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಆರಂಭಿಸಿದ್ದೇವೆ ಎಂದು ಯಲುವಹಳ್ಳಿ ಗ್ರಾಮದ ರೈತ ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೆಲಗಡಲೆ ಮತ್ತು ತೊಗರಿ ಬಿತ್ತನೆ ಪ್ರಕ್ರಿಯೆ ಬೇಗನೇ ಕೈಗೊಳ್ಳಬೇಕು. ಆದರೆ ರಾಗಿ, ಮುಸುಕಿನ ಜೋಳ ಮುಂತಾದ ಬೆಳೆಗಳಿಗೆ ಕಾಲಾವಕಾಶ ಇದೆ. ಅದಕ್ಕಾಗಿ ಈಗ ಹಂತಹಂತವಾಗಿ ಜಮೀನು ಉಳುಮೆ ಕೈಗೊಳ್ಳುತ್ತಿದ್ದೇವೆ. ಉತ್ತಮ ರೀತಿಯಲ್ಲಿ ಮಳೆಯಾದರೆ, ಕೊಳವೆಬಾವಿಗಳ ಮೇಲೆ ಅವಲಂಬಿಸುವ ಅಗತ್ಯ ಇರುವುದಿಲ್ಲ. ಆದರೆ ಮಳೆ ಬಾರದಿದ್ದರೆ, ಅನಿವಾರ್ಯವಾಗಿ ಕೊಳವೆಬಾವಿಗಳಿಂದಲೇ ನೀರು ಪಡೆಯಬೇಕಾಗುತ್ತದೆ ಎಂದು ಅವರು ಹೇಳಿದರು.

ಕೃಷಿ ಚಟುವಟಿಕೆ ಆರಂಭಗೊಂಡಿದ್ದು ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮುಂತಾದವು ದಾಸ್ತಾನು ಮಾಡಿದ್ದೇವೆ. ಯಾವುದರ ಕೊರತೆ ಕಾಡದಂತೆ ನಿಭಾಯಿಸುತ್ತೇವೆ. ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಜಿ.ಅನೂಪ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.