ಬಣಕಲ್ ಸಮೀಪದ ಫಲ್ಗುಣಿಯಲ್ಲಿರುವ ಮಾವನ ಮನೆಗೆ ತೆರಳಲು ಕೊಟ್ಟಿಗೆಹಾರದಲ್ಲಿ ಯಾವುದೇ ವಾಹನ ಸಿಕ್ಕಿರಲಿಲ್ಲ. ಧಾರಾಕಾರವಾಗಿ ಮಳೆಯೂ ಸುರಿಯುತ್ತಿದ್ದರಿಂದ ವಾಹನಗಳ ಓಡಾಟವೂ ಕಡಿಮೆ ಇತ್ತು. ಕಾದು ಸುಸ್ತಾದ ಅಶೋಕ್, ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ‘ಮನೆಯಲ್ಲಿ ತುಂಬಾ ಗಲಾಟೆಯಾಗುತ್ತಿದೆ’ ಎಂದು ಹೇಳಿ ಪೊಲೀಸ್ ವಾಹನವನ್ನು ಕರೆಸಿಕೊಂಡಿದ್ದಾರೆ. ಕೂಡಲೇ ಕೊಟ್ಟಿಗೆಹಾರಕ್ಕೆ ಬಂದ ಪೊಲೀಸರು ಅಶೋಕ ಅವರನ್ನು ಕಂಡು, ‘ಏನು ಗಲಾಟೆ, ಮನೆಗೆ ಹೋಗೋಣ ಬನ್ನಿ’ ಎಂದು ಹೇಳಿದ್ದಾರೆ.