ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತ: ತಾಯಿ, ಇಬ್ಬರು ಮಕ್ಕಳ ಸಾವು

Published 28 ಜೂನ್ 2024, 15:10 IST
Last Updated 28 ಜೂನ್ 2024, 15:10 IST
ಅಕ್ಷರ ಗಾತ್ರ

ಬೀರೂರು: ಹಾವೇರಿ ಜಿಲ್ಲೆ ಬ್ಯಾಡಗಿ ರಾಷ್ಟ್ರೀಯ ಹೆದ್ದಾರಿಯ ಗುಂಡನಹಳ್ಳಿ ಕ್ರಾಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ‌ ಮೃತಪಟ್ಟವರಲ್ಲಿ ಬೀರೂರಿನ ಗೃಹಿಣಿ ಮತ್ತು ಆಕೆಯ ಇಬ್ಬರು ಮಕ್ಕಳು ಸೇರಿದ್ದಾರೆ.

ಬೀರೂರಿನ ಶಿವಾಜಿನಗರ ಬಡಾವಣೆ ನಿವಾಸಿ ರಾಘವೇಂದ್ರ ಪವಾರ್ ಅವರ ಪತ್ನಿ ಅಂಜಲಿ (30) ಮಕ್ಕಳಾದ ಆರ್ಯ (4) ಮತ್ತು ನಂದನ್ (3) ಮೃತಪಟ್ಟವರು. ಅಂಜಲಿ ಕಳೆದ ಸೋಮವಾರ ತಮ್ಮ ತವರು ಮನೆ ಭದ್ರಾವತಿಗೆ ತೆರಳಿದ್ದರು. ಅಲ್ಲಿಂದ ಸಂಬಂಧಿಕರೊಂದಿಗೆ ತುಳಜಾಪುರ ಮತ್ತು ಸವದತ್ತಿಯಲ್ಲಿ ದೇವರ ದರ್ಶನ ಪಡೆದು ವಾಪಸಾಗುವಾಗ ದುರ್ಘಟನೆ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT