ಕಡೂರು: ಇಲ್ಲಿನ ಅಖಿಲ ಕರ್ನಾಟಕ ಆಂಬ್ಯುಲೆನ್ಸ್ ರೋಡ್ ಸೇಫ್ಟಿ ಸಂಘದ ವತಿಯಿಂದ ಭಾನುವಾರ ಎರಡು ಆಂಬ್ಯುಲೆನ್ಸ್, ಒಂದು ಟನ್ ತರಕಾರಿ ಹಾಗೂ ದಿನಬಳಕೆ ವಸ್ತುಗಳನ್ನು ಕೇರಳದ ವಯನಾಡಿಗೆ ಕಳುಹಿಸಲಾಯಿತು.
ಶಾಸಕರ ಆಪ್ತ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ‘ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತೊಂದರೆಗೀಡಾದವರ ನೆರವಿಗೆ ಕಡೂರಿನ ಆಂಬ್ಯುಲೆನ್ಸ್ ಚಾಲಕರು ಧಾವಿಸುತ್ತಿರುವುದು ಇತರರಿಗೆ ಅನುಕರಣೀಯ’ ಎಂದರು.
ವಿನಯ್ ವಳ್ಳು, ಅಜೀಜ್, ಕ್ಯಾಂಟೀನ್ ಮಂಜು, ಗೌಸ್ ಪೀರ್ ಇದ್ದರು.