ಮೂಡಿಗೆರೆ: ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜಾರಿಗೊಳಿಸಿದ ಚತುಷ್ಪಥ ಹೆದ್ದಾರಿಗಳು ದೇಶಕ್ಕೆ ಆರ್ಥಿಕ ಶಕ್ತಿ ನೀಡಿದವು’ ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿ ಪಂಚವಟಿಯಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಅಟಲ್ ಬಿಹಾರಿ ವಾಜಪೇಯಿ ಅವರು ದಕ್ಷ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರು. ಅದರ ಪರಿಣಾಮವಾಗಿಯೇ ಕಾರ್ಗಿಲ್ ಯುದ್ಧದಲ್ಲಿ ಭಾರತವು ವಿಜಯೋತ್ಸವ ಆಚರಿಸುವಂತಾಯಿತು. ಪ್ರಮುಖ ನಗರಗಳನ್ನು ಸಂಪರ್ಕಿಸಲು ಅವರು ಹಾಕಿದ ಹೆದ್ದಾರಿ ಯೋಜನೆಯು ಆರ್ಥಿಕ ಪ್ರಗತಿಗೆ ಸಹಕಾರಿಯಾಯಿತು’ ಎಂದರು.

ಬಿಜೆಪಿ ಪದಾಧಿಕಾರಿಗಳಾದ ಪ್ರವೀಣ್ ಮಗ್ಗಲಮಕ್ಕಿ, ಪಂಚಕ್ಷರಿ ಹಾಲೂರು, ಕೋಡದಿಣ್ಣೆ ಧನಿಕ್, ಪ್ರಶಾಂತ್ ಬಿಳಗುಳ, ಕಾಮಾಕ್ಷಿ, ಪ್ರವೀಣ್, ಪದ್ಮನಾಭ, ರವಿಒಡೆಯರ್, ರಂಗನಾಥ್, ಮಂಜುನಾಥ್ ಪಟೇಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.