ಬಾಳೆಹೊನ್ನೂರು: ‘ಅಡಿಕೆ ಎಲೆಚುಕ್ಕಿ, ಹಳದಿ ಎಲೆ ರೋಗದಿಂದ ತತ್ತರಿಸಿರುವ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯದ ತೋಟಗಾರಿಕೆ ಇಲಾಖೆಗೆ ₹35 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ. ಕೇಂದ್ರದ ಕೃಷಿ ಸಚಿವರು ಈಚೆಗೆ ಸಾಗರದಲ್ಲಿ ನಡೆದ ಅಡಿಕೆ ಬೆಳೆಗಾರರ ಸಮ್ಮೇಳನದಲ್ಲಿ ಭಾಗವಹಿಸಿ, ವಾರದೊಳಗೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ್ದಾರೆ. ₹35 ಕೋಟಿ ಅನುದಾನ ಬಳಕೆ ಕುರಿತು ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳು, ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲೇ ಈ ಅನುದಾನ ಬಳಕೆ ಬಗ್ಗೆ ನಿಯಮ ರೂಪಿಸಲಾಗುವುದು’ ಎಂದರು.

ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಸಂಶೋಧನಾ ಕೇಂದ್ರಕ್ಕೆ ₹10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಮ್ಯಾನ್ಮಾರ್ ದೇಶದಿಂದ ಭಾರತಕ್ಕೆ ಅಡಿಕೆ ಕಳ್ಳ ಸಾಗಣೆ ತಡೆಯಲು ಗಡಿಯನ್ನು ಬಿಗಿಗೊಳಿಸಲಾಗಿದೆ. ದೇಶದ ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಅಡಿಕೆ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗಿದೆ. ಇಂದು ಅಡಿಕೆ ₹50 ಸಾವಿರ ಬೆಲೆ ದಾಟಲು ಪ್ರಧಾನಿ ಮೋದಿ ಅವರ ಕೃಷಿಕ ಪರ ಕಾಳಜಿಯೇ ಕಾರಣ ಎಂದರು.

ಸಂಸದ ರಾಘವೇಂದ್ರ ಅವರು, ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಮಗನ ಮದುವೆಯ ಆಹ್ವಾನ ಪತ್ರಿಕೆ ನೀಡಿದರು.

ರಾಘವೇಂದ್ರ ಅವರ ಸಹೋದರಿ ಅರುಣಾದೇವಿ, ಪತ್ನಿ ತೇಜಸ್ವಿನಿ, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಶಿವಮೊಗ್ಗದ ದತ್ತಾತ್ರಿ, ಕುವೆಂಪು ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಬಳ್ಳಕೆರೆ ಸಂತೋಷ್ ಇದ್ದರು.

ರೈತರಿಗೂ ಮೋಸ

ರಾಜ್ಯದಲ್ಲಿ ವಿದ್ಯುತ್ ನೀರು ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಈ ಹಿಂದೆ ಹೆಚ್ಚುವರಿಯಾಗಿ ನೀಡುತ್ತಿದ್ದ 50 ಎಂ.ಎಲ್ ಹಾಲನ್ನು ಸರ್ಕಾರ ನಿಲ್ಲಿಸಿದೆ. ಈ ಮೂಲಕ ರೈತರಿಗೂ ಸರ್ಕಾರ ಮೋಸ ಮಾಡುತ್ತಿದೆ. ಇದನ್ನೆಲ್ಲಾ ವಿರೋದಿಸಿ ರಾಜ್ಯದೆಲ್ಲೆಡೆ ಜನಾಕ್ರೋಶ ಯಾತ್ರೆ ಏ. 27ರವರೆಗೆ ನಡೆಯುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.