ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಹೊನ್ನೂರು: 16ನೇ ಶತಮಾನದ ಸ್ಮಾರಕ ಶಿಲ್ಪ ಪತ್ತೆ

Last Updated 26 ಜುಲೈ 2022, 15:43 IST
ಅಕ್ಷರ ಗಾತ್ರ

ಹೆದ್ದಸೆ (ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಸೆ ಪ್ರದೇಶದಲ್ಲಿ 15-16ನೇ ಶತಮಾನಕ್ಕೆ ಸೇರಿದ ಭಗ್ನಗೊಂಡಿರುವ ಸತಿಗಲ್ಲು ಮತ್ತು ಸ್ತ್ರೀ ವಿಗ್ರಹವು ಪತ್ತೆಯಾಗಿದೆ ಎಂದು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ತಿಳಿಸಿದ್ದಾರೆ.

ಕಾಡಿನ ಹಾಡ್ಯದಲ್ಲಿ ಕಂಡು ಬಂದಿರುವ ಭಗ್ನಗೊಂಡಿರುವ ಸತಿಗಲ್ಲು 45 ಸೆಂ.ಮೀ. ಉದ್ದ ಮತ್ತು ಅಗಲವಾಗಿದ್ದು ತನ್ನ ಎರಡೂ ಕೈಯಲ್ಲಿಯೂ ಆಯುಧವನ್ನು ಹಿಡಿದಿರುವಂತೆ ಕೆತ್ತಲಾಗಿದೆ.

ಕಿರೀಟಧಾರಿಯಾಗಿರುವ ಇನ್ನೊಂದು ಸ್ತ್ರೀ ಶಿಲ್ಪವು ಸಮಭಂಗಿಯಲ್ಲಿ ನಿಂತಿದ್ದು, ವಿಗ್ರಹದ ಕೈಗಳು, ಮುಖದ ಭಾಗ ಭಗ್ನಗೊಂಡಿರುತ್ತದೆ. ಈ ವಿಗ್ರಹವು 15 ಸೆಂ ಮೀ ಅಳತೆಯನ್ನು ಹೊಂದಿದ್ದು, ಜಗದೀಶ್ ಎಂಬುವರು ಹೊಲದ ಕೆಲಸ ಮಾಡುವ ಸಂದರ್ಭದಲ್ಲಿ ದೊರಕಿದೆ ಎಂದು ಅವರು ತಿಳಿಸಿದ್ದಾರೆ.

ಕ್ಷೇತ್ರ ಕಾರ್ಯದಲ್ಲಿ ಹೆದ್ದಸೆಯ ಉದಯ, ಸತೀಶ್, ದಿನೇಶ್ ಮತ್ತು ಶರತ್ ಸಹಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT