ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ₹5,300 ಕೋಟಿ ಅನುದಾನ ಇನ್ನೂ ಮರೀಚಿಕೆಯಾಗಿದ್ದು, ಈ ಬಾರಿಯಾದರೂ ಬಿಡುಗಡೆ ಮಾಡಬೇಕು ಎಂಬ ಕೂಗು ಜಿಲ್ಲೆಯ ಜನರಲ್ಲಿದೆ.

ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ನಾಲೆಗಳ ಮೂಲಕ ಕೊಂಡೊಯ್ಯುವ ಯೋಜನೆ ಇದಾಗಿದ್ದು, ನಾಲೆ ಸುತ್ತಮುತ್ತ ಬರುವ ಹಳ್ಳಿಗಳ 5 ಲಕ್ಷ ಎಕರೆಗೆ ಹನಿ ನೀರಾವರಿ ಕಲ್ಪಿಸುವ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ, ₹5,300 ಕೋಟಿ ಅನುದಾನ ನೀಡುವುದಾಗಿ ಹೇಳಿತ್ತು.

ಆದರೆ, ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅರಣ್ಯ ಹಾಗೂ ಇನ್ನಿತರ ಆಕ್ಷೇಪಣೆಗಳು ಅನುದಾನ ಬಿಡುಗಡೆಗೆ ತೊಡಕುಂಟು ಮಾಡುತ್ತಿವೆ. ಆಕ್ಷೇಪಣೆಗಳಿಗೆ ಸಮಜಾಯಿಷಿ ಒದಗಿಸುವುದರಲ್ಲೇ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳು ಸುಸ್ತಾಗಿದ್ದಾರೆ. ಸಮಜಾಯಿಷಿ ಸಲ್ಲಿಸಿ ವಾಪಸ್ ಬರುವಷ್ಟರಲ್ಲಿ ಮತ್ತೊಂದು ಆಕ್ಷೇಪಣೆ ಸಿದ್ಧವಾಗಿರುತ್ತದೆ. ಇದೇ ಪ್ರಕ್ರಿಯೆಯಲ್ಲಿ ಕಾಲಹರಣವಾಗಿದ್ದು, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯೇ ಆಗಿಲ್ಲ. ಇದರಿಂದಾಗಿ ನಾಲೆ ಕಾಮಗಾರಿಗಳು ಅರ್ಧದಲ್ಲೇ ನಿಂತಿವೆ.

ಸದ್ಯ ಅಧಿಕಾರಿಗಳ ತಂಡ ಎಲ್ಲಾ ತಕರಾರುಗಳಿಗೆ ಸಮಜಾಯಿಷಿ ಸಹಿತ ವಿವರಣೆ ನೀಡಲು ದೆಹಲಿಗೆ ತೆರಳಿದೆ. ಈ ಬಾರಿ ಕೇಂದ್ರದಿಂದ ಅನುದಾನ ಲಭ್ಯವಾಗುವ ವಿಶ್ವಾಸ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯ ಸರ್ಕಾರದಿಂದ ಪ್ರತಿವರ್ಷ ಅನುದಾನ ನಿಗದಿಯಾದರೂ ತುಮಕೂರು ಶಾಖಾ ನಾಲೆಗೆ ಅಷ್ಟಾಗಿ ಮಹತ್ವ ದೊರೆತಿಲ್ಲ ಎಂಬುದು ರೈತರ ಆರೋಪ. ಜಿಲ್ಲೆಯಲ್ಲಿ ನಾಲೆ ಹಾದು ಹೋಗುವ ಸುತ್ತಮುತ್ತಲ ಹಳ್ಳಿಗಳಿಗೆ ಹನಿ ನೀರಾವರಿ ಕಲ್ಪಿಸಲು ಪೈಪ್ ಲೈನ್ ಅಳವಡಿಕೆಯಾಗಿದೆ. ಆದರೆ, ಯಾವುದೇ ರೈತರ ಜಮೀನಿಗೆ ಈವರೆಗೆ ನೀರು ಲಭ್ಯವಾಗಿಲ್ಲ.

ಮಳೆಗಾಲದಲ್ಲಿ ಮಾತ್ರ ಹನಿ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿದೆ. ಮಳೆ ಇದ್ದರೆ ಜಲಾಶಯದಲ್ಲಿ ನೀರು ಭರ್ತಿಯಾಗುತ್ತದೆ. ಮಳೆ ಇದ್ದಾಗ ರೈತರ ಜಮೀನಿಗೆ ನೀರಾವರಿಯ ಅಗತ್ಯ ಬರುವುದಿಲ್ಲ. ಕೆರೆ ತುಂಬಿಸುವ ಯೋಜನೆಗಳು ಸಮರ್ಪಕವಾಗಿ ಪೂರ್ಣಗೊಳ್ಳಬೇಕು ಎಂಬುದು ರೈತರ ಮನವಿ.

‘ಕೆರೆಗಳಿಗೆ ನೀರು ಹರಿಯಬೇಕು’

ಭದ್ರಾ ಉಪಕಣಿವೆ ಯೋಜನೆಯಲ್ಲಿ ಕೆರೆ ತುಂಬಿಸುವ ಯೋಜನೆ ನಾಲ್ಕು ಹಂತಗಳಲ್ಲಿದೆ. ಮೊದಲನೇ ಹಂತ ಬಹುತೇಕ ಪೂರ್ಣಗೊಂಡಿದೆ. ತರೀಕೆರೆ 51 ಮತ್ತು ಕಡೂರು ತಾಲ್ಲೂಕಿನ 3 ಸೇರಿ 54 ಕೆರೆಗಳಿಗೆ ನೀರು ಪೂರೈಕೆಯಾಗಲಿದೆ. ಎರಡನೇ ಹಂತದಲ್ಲಿ ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು 78 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಅರಸೀಕೆರೆ ತಾಲ್ಲೂಕಿನ 3 ಮತ್ತು 75 ಕೆರೆಗಳಿಗೆ ನೀರು ಪೂರೈಕೆಯಾಗಲಿದೆ. ಮೂರನೇ ಹಂತದಲ್ಲಿ ಕಾಮಗಾರಿ ಇನ್ನೂ ಆರಂಭವಾಗಬೇಕಿದೆ. ನಾಲ್ಕನೇ ಹಂತದ ಕಾಮಗಾರಿಯೆ ಯೋಜನೆ ಸಿದ್ಧವಾಗಬೇಕಿದೆ. ₹1281 ಕೋಟಿ ಮೊತ್ತದ ಯೋಜನೆ ಇದಾಗಿದೆ. ಮೂರು ಮತ್ತು ನಾಲ್ಕನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೀಘ್ರವೇ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಪೂರೈಸಬೇಕು ಎಂಬುದು ಕಡೂರು ತಾಲ್ಲೂಕಿನ ರೈತರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.