ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಮಹಾಗಣಪತಿ ಹಾಗೂ ದುರ್ಗಾದೇವಿ ಉತ್ಸವಕ್ಕೆ ಲೈಟಿಂಗ್ಸ್, ಸೌಂಡ್ ಸಿಸ್ಟಂ ಹಾಕಲು ನನಗೆ ಗುತ್ತಿಗೆ ನೀಡಲಾಗಿತ್ತು. ಗಣಪತಿ ವಿಸರ್ಜನೆ ಆದ ಮೇಲೆ ದುರ್ಗಾದೇವಿ ಸಮಿತಿ ಸದಸ್ಯರಾದ ಶಂಕರ್ ಎಂಬುವರು ದುರ್ಗಿ ಉತ್ಸವಕ್ಕೆ ಲೈಟಿಂಗ್ಸ್ ಅಳವಡಿಸಲು ಭಗವಾ ಧ್ವಜ ತೆರವುಗೊಳಿಸಲು ಸೂಚಿಸಿದ್ದರು. ಆದ್ದರಿಂದ ನಾನು ಭಗವಾ ಧ್ವಜ ತೆರವುಗೊಳಿಸಿದ್ದೇನೆ. ಆದರೆ, ಗಣಪತಿ ಸಮಿತಿಯವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ದುರ್ಗಿ ಸಮಿತಿಯ ಸದಸ್ಯರೊಬ್ಬರು ಮಾಡಿದ ತಪ್ಪನ್ನು ನನ್ನ ಮೇಲೆ ಹಾಕಿದ್ದಾರೆ. ಈ ಬಗ್ಗೆ ತಾನು ಯಾವ ದೇವರ ಬಳಿ ಬೇಕಾದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ದುರ್ಗಿ ಸಮಿತಿಯವರು ಭಗವಾ ಧ್ವಜ ತೆರವುಗೊಳಿಸಲು ಸೂಚಿಸಿಲ್ಲ ಎಂದಾದರೆ ಅವರು ಕೂಡ ದೇವರ ಬಳಿ ಬಂದು ಪ್ರಮಾಣ ಮಾಡಬೇಕು' ಎಂದು ಒತ್ತಾಯಿಸಿದರು.