ಮೂಡಿಗೆರೆ: ಜನವರಿ 3ರಂದು ನಡೆಯಲಿರುವ ಭೀಮಾ ಕೊರೆಗಾಂವ್ ವಿಜಯೋತ್ಸವದ ಪ್ರಚಾರ ಜಾಥಾಕ್ಕೆ ಗುರುವಾರ ಕಾಂಗ್ರೆಸ್ ಮುಖಂಡ ಎಂ.ಪಿ. ಕುಮಾರಸ್ವಾಮಿ ಚಾಲನೆ ನೀಡಿದರು.

‘ಹಿರಿಯರ ತ್ಯಾಗ, ಬಲಿದಾನ, ಶೌರ್ಯದ ಇತಿಹಾಸವೇ ಭೀಮಾ ಕೊರೆಗಾಂವ್ ವಿಜಯೋತ್ಸವʼ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊಸಕೆರೆ ರಮೇಶ್ ಮಾತನಾಡಿ, ಭೀಮಾ ಕೊರೆಗಾಂವ್ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ’ ಎಂದರು.

ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕೆ.ಎಂ. ಸಿದ್ದೇಶ್ ಮಾತನಾಡಿ, ‘ಜ.3ರಂದು ಕೊಲ್ಲಿಬೈಲ್ ತಿರುವಿನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾ ತಂಡದೊಂದಿಗೆ ಮೆರವಣಿಗೆ ನಡೆಯಲಿದ್ದು, ಲಯನ್ಸ್ ವೃತ್ತದಲ್ಲಿ ಸಮಾವೇಶ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಕರ್ನಾಟಕ ಬೌದ್ಧ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಹ.ರಾ. ಮಹೇಶ್, ಕುಶಾಲನಗರದ ಉಪನ್ಯಾಸಕ ಭಾಸ್ಕರ್ ವಿಟ್ಲ, ಚಿತ್ರ ನಟ ದುನಿಯಾ ವಿಜಯ್ ಮತ್ತಿತರರು ಭಾಗವಹಿಸುವರು’ ಎಂದರು.

ಜಾಥಾಕ್ಕೆ ಚಾಲನೆ ನೀಡುವಾಗ ಹೆಸಗಲ್ ಗಿರೀಶ್, ಯು.ವಿ. ಸುರೇಂದ್ರ, ಸುಧೀರ್ ಚಕ್ರಮಣಿ, ಬಿ.ಎಂ.ಕುಮಾರ್ ಬಕ್ಕಿ, ದೇಜಪ್ಪ, ರತನ್ ಊರುಬಗೆ, ಕೋಮರಾಜ್, ಯು.ಬಿ. ನಾಗೇಶ್, ಅಭಿಜಿತ್, ದೇವರಾಜ್, ಸಂದೀಪ್, ಪ್ರಕಾಶ್, ಲಕ್ಷ್ಮಣ, ಚಂದ್ರ ಸಾಲುಮರ, ಅರುಣ, ಗಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.