ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ ಕಾಲದಲ್ಲೂ ಉತ್ತಮ ಆಡಳಿತ

ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
Last Updated 28 ಫೆಬ್ರುವರಿ 2021, 6:04 IST
ಅಕ್ಷರ ಗಾತ್ರ

ಕೊಪ್ಪ: ‘ಸಂಕಷ್ಟ ಕಾಲದಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡಿದ್ದಾರೆ’ ಎಂದು ಲೋಕೋಪಯೋಗಿ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ತಾಲ್ಲೂಕಿನ ಕಾಳನಾಯಕನ ಕಟ್ಟೆಯಿಂದ ಗೌರಿಗದ್ದೆ ದತ್ತಾಶ್ರಮಕ್ಕೆ ಹೋಗುವ ರಸ್ತೆಯಲ್ಲಿ ₹ 75 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಯನ್ನುಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಕಾಳನಾಯಕನ ಕಟ್ಟೆಯಿಂದ ಗೌರಿಗದ್ದೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ್ದೇನೆ. ಕಾಳನಾಯಕನಕಟ್ಟೆ, ಗೌರಿಗದ್ದೆ, ಮೇಲ್ ಬಿಳ್ರೆ ರಸ್ತೆ ಅಭಿವೃದ್ಧಿಗೆ ಮಂಜೂ ರಾತಿ ನೀಡಲಾಗಿದ್ದು, ಕಾಮಗಾರಿ ನಡೆಯಲಿದೆ. ಲೋಕೋಪಯೋಗಿ ಇಲಾಖೆ ಕಡೆಯಿಂದ ಅನೇಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ಬಳಿಕ ಗೌರಿಗದ್ದೆ ದತ್ತಾಶ್ರಮದಲ್ಲಿ ಹಮ್ಮಿ ಕೊಂಡಿದ್ದ ಮೃತ್ಯುಂಜಯ ಯಾಗದ ಕೊನೆಯ ದಿನದ ಪೂಜೆಯಲ್ಲಿ ಡಿಸಿಎಂ ಭಾಗಿಯಾದರು.

ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ರಾಮ ಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರವೀಣ್ ಹಣಗಲ್, ತಹಶೀಲ್ದಾರ್ ಎಚ್.ಎಸ್.ಪರಮೇಶ್ ಇದ್ದರು.

ಮಹಾ ಮೃತ್ಯುಂಜಯ ಯಾಗ: ಗೌರಿಗದ್ದೆ ಸ್ವರ್ಣಪೀಠಿಕಾಪುರ ದತ್ತಾಶ್ರಮದ ವಿನಯ ಗುರೂಜಿ ಮಾತನಾಡಿ, ‘ಆಶ್ರಮದಲ್ಲಿ 116 ಮೂಲಿಕೆಗಳಿಂದ ಮಹಾ ಮೃತ್ಯುಂಜಯ ಯಾಗ ನಡೆಯುತ್ತಿದೆ. ಧರ್ಮಿಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದೆ, ಅವರ ಆಯುಷ್ಯ ವೃದ್ಧಿಗಾಗಿ ಇಂದು ಪ್ರಾರ್ಥಿಸಿದ್ದೇವೆ’ ಎಂದರು.

‘ಕಾರಜೋಳ ಅವರ ಪುತ್ರ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯ ವೃದ್ಧಿಗಾಗಿ ದತ್ತಾತ್ರೆಯರಿಗೆ ಆಶ್ರಮದಲ್ಲಿ ಪ್ರಾರ್ಥಿಸಲಾಗಿತ್ತು. 16 ದಿನ ಅಲ್ಲಿ ಅವರ ಹೆಸರಲ್ಲಿ 48 ಜನ ನೀರಲ್ಲಿ ಕುಳಿತು ಜಪಾದಿಗಳನ್ನು ಮಾಡಿ, ವೇದದ ತಾಕತ್ತು ಏನು ಎಂಬುದನ್ನು ಪ್ರಪಂಚಕ್ಕೆ ಭಗವಂತ ತೋರಿಸಿದ್ದಾನೆ. 48ನೇ ದಿನವಾದ ಶನಿವಾರ ಮೃತ್ಯುಂಜಯ ಯಾಗ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT