ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಟ್ಟಿಗೆಹಾರ | ಹಳ್ಳಕ್ಕೆ ಬಿದ್ದ ಕಾರು: ಇಬ್ಬರು ಪ್ರಾಣಾಪಾಯದಿಂದ ಪಾರು

Published 28 ಜೂನ್ 2024, 14:16 IST
Last Updated 28 ಜೂನ್ 2024, 14:16 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಮಂಗಳೂರಿನಿಂದ ಮೂಡಿಗೆರೆ ಹೋಗುತ್ತಿದ್ದ ಕಾರೊಂದು, ರಭಸದ ಮಳೆಯಿಂದ ರಸ್ತೆ ತಿರುವು ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನದಿಯ ಕಿರು ಕಾಲುವೆಗೆ ಉರುಳಿದ ಘಟನೆ ಶುಕ್ರವಾರ ನಡೆದಿದೆ.

ಕಾರಿನಲ್ಲಿ ತಂದೆ ಮತ್ತು ಮಗ ಇದ್ದರು. ಅದೃಷ್ಟವಶಾತ್‌ ಇಬ್ಬರೂ ಪ್ರಾಣಾ‍‍ಪಾಯದಿಂದ ಪಾರಾಗಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲುವುದರಿಂದ ಈಗಾಗಲೇ ನಾಲ್ಕು ವಾಹನಗಳು ಈ ತಿರುವಿನಲ್ಲಿ ಅಪಘಾತಕ್ಕ ಈಡಾಗಿವೆ.  ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಸಮೀಪ ಹೆದ್ದಾರಿ ಸಮತಟ್ಟು ಇಲ್ಲದೇ ಇರುವುದರಿಂದ, ಇಲ್ಲೂ ನೀರು ನಿಂತು ಅವಘಡ ಸಂಭವಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT