ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘದಿಂದ ₹ 10.12 ಕೋಟಿ ಬೆಳೆ ಸಾಲ’

Last Updated 24 ಸೆಪ್ಟೆಂಬರ್ 2022, 5:49 IST
ಅಕ್ಷರ ಗಾತ್ರ

ತರೀಕೆರೆ: ಇಲ್ಲಿನ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ವಾರ್ಷಿಕ ಸಭೆಯು ಪಟ್ಟಣದ ಶಾರದಾ ಭವನದಲ್ಲಿ ಶುಕ್ರವಾರ ನಡೆಯಿತು.

‘ಸಹಕಾರಿ ಸಂಘದ ನಿಯಾಮವಳಿ ಮೀರಿ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ಎಂ.ನರೇಂದ್ರ ವಹಿಸಿಕೊಂಡಿರುವುದು ಸರಿಯಾದ ಕ್ರಮವಲ್ಲ. ನಿಯಮದ ಪ್ರಕಾರ ಎಚ್.ಪರಶುರಾಮ್ ಅಧ್ಯಕ್ಷತೆ ವಹಿಸಿಕೊಂಡು ಸಭೆ ನಡೆಸಬೇಕು’ ಎಂದು ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಟಿ.ಎಲ್.ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು.

ನಂತರ ಸಹಕಾರಿ ಸಂಘದ ಉಪಾಧ್ಯಕ್ಷ ಪರಶುರಾಮ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ನಂತರ ಮಾತನಾಡಿದ ಅವರು, ‘ಸಂಘವು ₹ 10.12 ಕೋಟಿ ಬೆಳೆ ಸಾಲ ನೀಡಿದೆ ಹಾಗೂ ದ್ವಿ ಚಕ್ರ ವಾಹನ ಸಾಲ, ಬಂಗಾರ ಸಾಲ, ಅಡಿಕೆ ಅಡಮಾನ ಸಾಲ ನೀಡಿದೆ’ ಎಂದರು.

ಸಂಘದ ಸದಸ್ಯರಾದ ಹಾಲು ವಜ್ರಪ್ಪ ಮಾತನಾಡಿ, ಅಡಿಟ್ ವರದಿಯಲ್ಲಿ ಹಲವಾರು ನ್ಯೂನತೆಗಳಿವೆ. ಅನುಪಾಲನಾ ವರದಿ ಸಕ್ಷಮ ಪ್ರಾಧಿಕಾರಕ್ಕೆ ದೂರು ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕುರಬ ಸಮಾಜದ ಅಧ್ಯಕ್ಷ ಪದ್ಮರಾಜ್, ಪುರಸಭೆ ಮಾಜಿ ಅಧ್ಯಕ್ಷ ಬೈಟು ರಮೇಶ್, ಈರಣ್ಣ,
ನಿರ್ದೇಶಕರಾದ ಎಂ.ನರೇಂದ್ರ, ರಾಮಚಂದ್ರಪ್ಪ, ಪ್ರಕಾಶ್ ವರ್ಮ, ಟಿ.ಜಿ.ಮಂಜುನಾಥ, ಗಿರಿರಾಜು, ಸುರೇಶ್, ರೇಣುಕಮ್ಮ, ಕಲಾವತಿ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT