ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು ನೆಲೆಬೆಲೆ-2’ ಪುಸ್ತಕ ಬಿಡುಗಡೆ

Published 9 ಮಾರ್ಚ್ 2024, 14:37 IST
Last Updated 9 ಮಾರ್ಚ್ 2024, 14:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ಪ್ರಾಚೀನ ದೇವಾಲಯಗಳ ಸಂಪೂರ್ಣ ವಿವರವನ್ನೊಳಗೊಂಡ ‘ಚಿಕ್ಕಮಗಳೂರು ನೆಲೆಬೆಲೆ-2’ ಪುಸ್ತಕವನ್ನು ಶಾಸಕ ಎಚ್.ಡಿ.ತಮ್ಮಯ್ಯ ಶನಿವಾರ ನಗರದ ಬಸವ ಮಂದಿರದಲ್ಲಿ ಬಿಡುಗಡೆಗೊಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಬರೆದಿರುವ ಶಿವಚೈತನ್ಯ ಕಿರಣ ಪ್ರಕಾಶನ ಹೊರತಂದಿರುವ ಪುಸ್ತಕ ಇದಾಗಿದೆ. ಚಿಕ್ಕಮಗಳೂರು-ಹಿರೇಮಗಳೂರು ಬಸವನಹಳ್ಳಿ, ಶೃಂಗೇರಿ, ಅಂಗಡಿ, ಮರ್ಲೆ ಮೊದಲಾದ ಐತಿಹಾಸಿಕ, ಪ್ರೇಕ್ಷಣೀಯ, ಪ್ರಾಚೀನ ಸ್ಥಳಗಳ ಮಾಹಿತಿ ಪುಸ್ತಕದಲ್ಲಿದೆ.

ಬಸವತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ್, ಸಾಹಿತಿ ಬಿ.ತಿಪ್ಪೇರುದ್ರಪ್ಪ, ಶಿವಪ್ರಕಾಶ್, ದೀಪಕ್ ದೊಡ್ಡಯ್ಯ, ಹಿರೇಗೌಜ ಶಿವಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT