ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಿಂದ ಆಲ್ದೂರು–ಬಾಳೆಹೊನ್ನೂರು– ಶೃಂಗೇರಿ ರಸ್ತೆ ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ರಸ್ತೆ. ಈ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು, ಇದನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿಪಡಿಸಬೇಕು ಎಂದು ಬೇಡಿಕೆ ಹೆಚ್ಚಾಗಿದೆ.

ಚಿಕ್ಕಮಗಳೂರು ಎಂದರೆ ಪ್ರವಾಸಿ ತಾಣಗಳ ಬೀಡು. ಮುಳ್ಳಯ್ಯನಗಿರಿ ಪ್ರವಾಸ ಬಂದವರು ಧಾರ್ಮಿಕ ಸ್ಥಳವಾಗಿ ಶೃಂಗೇರಿ, ಕಳಸ, ಹೊರನಾಡು ಭಾಗಕ್ಕೆ ತೆರಳಲು ಆಸಕ್ತಿ ವಹಿಸುತ್ತಾರೆ. ಆದರೆ, ಚಿಕ್ಕಮಗಳೂರಿನಿಂದ ಆಲ್ದೂರು–ಬಾಳೆಹೊನ್ನೂರು ಮಾರ್ಗವಾಗಿ ಇರುವ ರಸ್ತೆಯೇ ಪ್ರಮುಖ ರಸ್ತೆ.

ಕೊಪ್ಪ, ಎನ್.ಆರ್.ಪುರ, ಕಳಸ ತಾಲ್ಲೂಕು ಕೇಂದ್ರಗಳಿಗೂ ಇದೇ ರಹದಾರಿ. ಆದರೆ, ಈ ರಸ್ತೆ ಮಳೆಗಾಲದಲ್ಲಿ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರವೇ ದುಸ್ತರವಾಗಿತ್ತು. ಇದರ ನಡುವೆಯೇ ವಾಹನಗಳು ಸಂಚರಿಸಿದ್ದು, ಮಳೆ ಬಿಡುವು ನೀಡಿದ ಬಳಿಕ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ.

ಆದರೆ, ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಬೇಕು. ಆಲ್ದೂರಿನಿಂದ ಬಾಳೆಹೊನ್ನೂರು ತನಕ ಇರುವ ತಿರುವು ರಸ್ತೆಗಳ ಸಾಗುವುದು ಪ್ರಯಾಣಿಕರಿಗೆ ಕಷ್ಟದ ಕೆಲಸ. ಸಾಧ್ಯವಾದಷ್ಟು ಸರಿಪಡಿಸಿ ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಶೃಂಗೇರಿ, ಹೊರನಾಡು ರೀತಿಯ ಪ್ರಸಿದ್ಧ ಧಾರ್ಮಿಕ ಸ್ಥಳಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬ ಒತ್ತಾಯ ಇದೆ. 2026–27ನೇ ಸಾಲಿನ ಬಜೆಟ್ನಲ್ಲಿ ಈ ರಸ್ತೆಗೆ ಕೇಂದ್ರ ಸರ್ಕಾರ ಹಣ ನಿಗದಿ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ, ಬಾಳೆಹೊನ್ನೂರು ರಂಭಾಪುರಿ ಮಠ ಸೇರಿ ಪ್ರಮುಖ ತಾಣಗಳಿಗೆ ಇರುವುದು ಇದೊಂದೇ ಹೆದ್ದಾರಿ. ಇದನ್ನು ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿಗೆ ಸೇರಿಸಬೇಕು. ಕೇಂದ್ರ ಸರ್ಕಾರವೇ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಬೇಕು ಎಂಬುದು ಬಾಳೆಹೊನ್ನೂರು ನಿವಾಸಿಗಳ ಆಗ್ರಹ.

ಅನುದಾನ ಕೋರಿದ ಸಂಸದ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಇತ್ತೀಚೆಗೆ ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಪತ್ರ ಬರೆದಿದ್ದು ಅನುದಾನ ನಿಗದಿ ಮಾಡಲು ಮನವಿ ಮಾಡಿದ್ದಾರೆ. ಪ್ರವಾಸಿ ತಾಣಗಳು ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದರೆ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಬೇರೆ ರಸ್ತೆಗಳಿಗೂ ನಬಾರ್ಡ್ ಮೂಲಕ ಅನುದಾನ ನಿಗದಿ ಮಾಡಲು ಸಂದರು ಕೋರಿದ್ದಾರೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.

ಆಗುಂಬೆ-ಶೃಂಗೇರಿ-ಚಿಕ್ಕಮಗಳೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆರಿಸಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಅನುದಾನ ದೊರಕುವ ನಿರೀಕ್ಷೆ ಇದೆ
-ಕೋಟ ಶ್ರೀನಿವಾಸ ಪೂಜಾರಿ, ಸಂಸದ

ಶೃಂಗೇರಿ ಬಾಳೆಹೊನ್ನೂರಿನ ರಂಭಾಪುರಿಗೆ ದೇಶದ ಹಲವೆಡೆಯಿಂದ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ಅಗತ್ಯ ತುಂಬಾ ಇದೆ
-ಕೌಶಿಕ್ ಪಟೇಲ್, ನೇಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.