ಚಿಕ್ಕಮಗಳೂರು: ಹೊಸ ವರ್ಷ ಆರಂಭವಾದ ನಂತರ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಪ್ರವಾಸೋದ್ಯಮ ನಂಬಿದವರ ಆರ್ಥಿಕ ವಹಿವಾಟು ಕುಸಿತವಾಗಿದ್ದು, ಹೋಂಸ್ಟೇ ಮತ್ತು ರೆಸಾರ್ಟ್ಗಳು ಅತಿಥಿಗಳ ಬರ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ರೆಸಾರ್ಟ್ ಮತ್ತು ಹೋಂಸ್ಟೇಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ನಡುವೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಮಳೆಗಾಲದಲ್ಲಿ ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವುದು ಸಾಮಾನ್ಯ. ಅದೇ ರೀತಿ ಫೆಬ್ರುವರಿ ತಿಂಗಳಿನಲ್ಲಿ ಪ್ರವಾಸಿಗರ ಕೊಂಚ ಕಡಿಮೆ ಇರುತ್ತಾರೆ. ಆದರೆ, ಸಾಧಾರಣ ಮಟ್ಟಿಗೆ ಪ್ರವಾಸಿಗರು ಇರುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಪ್ರವಾಸಿಗರೇ ಇಲ್ಲವಾಗಿದ್ದು, ಇದನ್ನು ನಂಬಿರುವ ವಹಿವಾಟಿನ ಮೇಲೆ ಹೆಚ್ಚು ಪರಿಣಾಮ ಬೀರಿದೆ.

ಪ್ರವಾಸಿಗರ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತ ಮುಳ್ಳಯ್ಯನಗಿರಿಗೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ. ಇದು ಪ್ರವಾಸಿಗರಲ್ಲಿ ಗೊಂದಲ ಉಂಟಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎನ್ನುತ್ತಾರೆ ಸ್ಥಳೀಯರು.

ಏಕಕಾಲಕ್ಕೆ 600 (ದಿನಕ್ಕೆ 1,200) ವಾಹನಗಳಿಗಷ್ಟೇ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿತು. ಈ ನಿರ್ಧಾರ ಕೈಗೊಂಡ ಬಳಿಕ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಹೋಂಸ್ಟೇ ಮಾಲೀಕರು.

‘ಬೆಂಗಳೂರಿನಲ್ಲಿ ವಾಹನ ಬುಕ್ಕಿಂಗ್ ಮಾಡುವಾಗ ಪ್ರವಾಸಿಗರಿಗೆ ಟ್ರಾವೆಲ್ಸ್ನವರು ದಿಕ್ಕು ತಪ್ಪಿಸುತ್ತಿದ್ದಾರೆ. ಆನ್ಲೈನ್ ಬುಕ್ಕಿಂಗ್ ಇಲ್ಲದೆ ಮುಳ್ಳಯ್ಯನಗಿರಿ ನೋಡಲು ಆಗುವುದಿಲ್ಲ. ಸ್ಥಳೀಯ ಜೀಪ್ ಮಾಲೀಕರೆ ಎಲ್ಲವನ್ನೂ ಬುಕ್ ಮಾಡಿರುತ್ತಾರೆ. ಎರಡು–ಮೂರು ಪಟ್ಟು ಹಣ ನೀಡಿ ಹೋಗಬೇಕಾಗುತ್ತದೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬೇರೆ ಕಡೆ ಹೋಗುವುದು ಸೂಕ್ತ ಎಂದು ಸಲಹೆ ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ’ ಎಂದು ಹೋಂಸ್ಟೇ ಮಾಲೀಕರ ಸಂಘದ ಅಧ್ಯಕ್ಷ ಎನ್.ಆರ್. ತೇಜಸ್ವಿ ತಿಳಿಸಿದರು.

ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಿದರೆ ಇತರೆಡೆಗಳಿಗೆ ಪ್ರವಾಸಿಗರು ಬರಲಿದ್ದಾರೆ ಎಂದು ಜಿಲ್ಲಾಡಳಿತ ಅಂದಾಜಿಸಿತ್ತು. ಆದರೆ, ಇಡೀ ಜಿಲ್ಲೆಗೆ ಪ್ರವಾಸಿಗರು ಕಡಿಮೆಯಾಗಿದ್ದಾರೆ. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಎಂದು ಮೂಡಿಗೆರೆ ತಾಲ್ಲೂಕಿನ ಹೋಂಸ್ಟೇ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.

ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಸಾಫ್ಟ್ವೇರ್ ಉದ್ಯೋಗಿಗಳೇ ಹೆಚ್ಚು. ಅಲ್ಲಿ ಉದ್ಯೋಗ ನಷ್ಟವಾಗುತ್ತಿರುವುದು ಕೂಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಹಲವರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದರೆ, ಉದ್ಯೋಗ ನಷ್ಟದ ಭೀತಿಯಲ್ಲಿ ಸಾಕಷ್ಟು ಜನ ಇದ್ದಾರೆ. ಈ ಎಲ್ಲಾ ಕಾರಣದಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

‘ಪ್ರವಾಸಿಗರ ಸಂಖ್ಯೆ ಎಷ್ಟೇ ಕಡಿಮೆಯಾದರೂ ವಾರಾಂತ್ಯದಲ್ಲಿ ಪ್ರತಿ ಹೋಂಸ್ಟೇಗಳಲ್ಲಿ ಕನಿಷ್ಠ ಒಂದೆರಡು ಕುಟುಂಬವಾದರೂ ವಾಸ್ತವ್ಯ ಹೂಡುತ್ತಾರೆ. ಆದರೆ, ಈಗ ಶನಿವಾರ ಮತ್ತು ಭಾನುವಾರ ಕೂಡ ಖಾಲಿ ದಿನಗಳನ್ನು ನೋಡುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ದಿನಗಳನ್ನೇ ನಾವು ನೋಡಿರಲಿಲ್ಲ’ ಎಂದರು.

ಇದರ ಜತೆಗೆ ಹೋಂಸ್ಟೇಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಇದು ಕೂಡ ಹೋಂಸ್ಟೇಗಳು ಖಾಲಿ ಉಳಿಯಲು ಕಾರಣ ಇರಬಹುದು ಎಂದು ಅಂದಾಜಿಸುತ್ತಾರೆ. ಒಟ್ಟಾರೆ ಜನವರಿ ಮತ್ತು ಫೆಬ್ರುವರಿಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ವಹಿವಾಟು ಕುಸಿದಿದೆ.

ಪೂರಕ ಮಾಹಿತಿ: ರವಿ ಕೆಳಂಗಡಿ, ಕೆ.ಎನ್.ರಾಘವೇಂದ್ರ, ಕೆ.ನಾಗರಾಜ್

ನೆಲಕಚ್ಚಿದ ಪ್ರವಾಸೋದ್ಯಮ ಕಳಸ:

ಇದೀಗ ತಾಲ್ಲೂಕಿನ ಹೊರನಾಡು ಮತ್ತು ಕಳಸದ ದೇವಸ್ಥಾನಗಳಲ್ಲಿ ಸರತಿಯೇ ಇಲ್ಲದೆ ದೇವರ ದರ್ಶನ ಆಗುತ್ತಿದೆ. ಬೆಳಗಿನ ಚಳಿಯ ನಡುವೆ ಸೂರ್ಯೋದಯವನ್ನು ಸವಿಯುವ ಅವಕಾಶ ಇದ್ದರೂ ಬೆಟ್ಟ ಗುಡ್ಡಗಳಲ್ಲಿ ಪ್ರವಾಸಿಗರ ಸದ್ದೇ ಇಲ್ಲವಾಗಿದೆ. ಪ್ರವಾಸಿಗರನ್ನೇ ನಂಬಿದ ಕಳಸ ಪಟ್ಟಣದ ಹೋಟೆಲ್ಗಳಲ್ಲಿ ಗ್ರಾಹಕರ ಕೊರತೆ ಇದ್ದರೆ ಮಲೆನಾಡಿನ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಕೊಳ್ಳುವವರ ಹೆಜ್ಜೆ ಗುರುತೇ ಇಲ್ಲವಾಗಿದೆ. ಹೋಂಸ್ಟೇಗಳಲ್ಲಿ ಶನಿವಾರವೂ ಅತಿಥಿಗಳು ಇಲ್ಲದೆ ಸಿಬ್ಬಂದಿಗೆ ರಜೆ ದೊರಕುತ್ತಿದೆ. ಜನವರಿ ಆರಂಭದಿಂದಲೂ ಕಳಸ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ನೆಲಕಚ್ಚಿರುವುದಕ್ಕೆ ಇವು ಸ್ಪಷ್ಟ ನಿದರ್ಶನಗಳು. ಕಳಸ ತಾಲ್ಲೂಕಿನ ಆರ್ಥಿಕತೆಯ ದೊಡ್ಡ ಅಂಶ ಪ್ರವಾಸಿಗರನ್ನೇ ಅವಲಂಬಿಸಿ ವರ್ಷಗಳೇ ಕಳೆದಿದೆ. ಕಾಳ್ಗಿಚ್ಚಿನ ಭಯದಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕುದುರೆಮುಖ ಗಿರಿಶ್ರೇಣಿ ಕುರಿಂಜಾಲು ಗಂಗಡಿಕಲ್ಲು ನೇತ್ರಾವತಿ ಚಾರಣವನ್ನು ನಿಲ್ಲಿಸಲಾಗಿದೆ. ಬಲ್ಲಾಳರಾಯನ ದುರ್ಗ ಮತ್ತು ಕ್ಯಾತನಮಕ್ಕಿಗೂ ಇದೇ ಕಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಚಾರಣಗಳ ಆಯೋಜನೆ ಮಾಡುತ್ತಿದ್ದವರು ಹೋಂಸ್ಟೇ ಮಾಲೀಕರು ಜೀಪ್ ಮಾಲೀಕರು ಕಳೆದ ತಿಂಗಳಿಂದ ತಮ್ಮ ವ್ಯವಹಾರ ಸ್ಥಗಿತಗೊಳಿಸಬೇಕಾಗಿದೆ. ಪ್ರವಾಸಿಗರೇ ಬರದೆ ಈ ವ್ಯವಹಾರದಲ್ಲಿ ತೊಡಗಿರುವವರು ಮಾರ್ಗದರ್ಶಿಗಳು ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣ ಕೂಡ ಪ್ರವಾಸೋದ್ಯಮಕ್ಕೆ ಕುತ್ತು ತಂದಿದೆ. ಮಾರ್ಚ್ ಅಂತ್ಯದವರೆಗೂ ಇದೇ ಸ್ಥಿತಿ ಮುಂದುವರೆಯುವ ಸೂಚನೆ ಇದ್ದು ಬಹಳಷ್ಟು ಸಿಬ್ಬಂದಿ ಕೆಲಸ ಕಳೆದುಕೊಳ್ಳುವಂತಾಗಿದೆ. ಆದಾಯ ಇಲ್ಲದಿದ್ದರೂ ಮುಂದಿನ ಎರಡು ತಿಂಗಳು ತಮ್ಮ ಸಿಬ್ಬಂದಿ ಮತ್ತು ಆಸ್ತಿಪಾಸ್ತಿ ನಿರ್ವಹಣೆ ಮಾಡುವುದು ದೊಡ್ಡ ಸವಾಲು ಎಂಬುದು ರೆಸಾರ್ಟ್ ಮಾಲೀಕರು ಹೇಳುತ್ತಾರೆ.

ಆರ್ಥಿಕ ಚಟುವಟಿಕೆಗೆ ಹಿನ್ನೆಡೆ ಮೂಡಿಗೆರೆ:

ಈ ಬಾರಿಯ ವರ್ಷಾಂತ್ಯ ಹಾಗೂ ನಂತರದ ದಿನಗಳಲ್ಲಿ ಪ್ರವಾಸೋದ್ಯಮವು ಗಣನೀಯವಾಗಿ ಕುಗ್ಗಿ ಹೋಗಿದ್ದು ಆರ್ಥಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ತಾಲ್ಲೂಕಿನಲ್ಲಿರುವ ಹೋಂಸ್ಟೇ ರೆಸಾರ್ಟ್ಗಳು ಪ್ರವಾಸಿಗರಿಗೆ ಸೇವೆ ನೀಡುವುದು ಮಾತ್ರವಲ್ಲದೇ ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸಿವೆ. ಹಲವು ಯುವಕರು ವಾರಾಂತ್ಯದಲ್ಲಿ ಎರಡು ದಿನಗಳಲ್ಲಿ ವಾರದ ದುಡಿಮೆಯನ್ನು ಹೋಂಸ್ಟೇ ರೆಸಾರ್ಟ್ಗಳಲ್ಲಿ ಪಡೆಯುತ್ತಿದ್ದಾರೆ. ಅದರೆ ಕಳೆದ ಒಂದು ತಿಂಗಳಿನಿಂದಲೂ ಪ್ರವಾಸೋದ್ಯಮ ಇದ್ದಕ್ಕಿದ್ದಂತೆ ಕುಗ್ಗಿ ಹೋಗಿದ್ದು ಪ್ರವಾಸಿಗರಿಲ್ಲದೇ ಪ್ರವಾಸಿ ತಾಣಗಳು ಮಾತ್ರವಲ್ಲದೆ ಹೋಂಸ್ಟೇ ರೆಸಾರ್ಟ್ಗಳು ಖಾಲಿ ಹೊಡೆಯುತ್ತಿವೆ. ಕೆಲವೆಡೆ ಪ್ರವಾಸಿ ತಾಣಗಳಿಗೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದು ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲು ಕಾರಣ ಎಂಬುದು ಹಲವಾರು ಹೋಂಸ್ಟೇ ಮಾಲೀಕರ ಅಭಿಪ್ರಾಯ. ಐಟಿಬಿಟಿ ನೌಕರರಲ್ಲಿ ಉದ್ಯೋಗ ಕಡಿತದ ಪರಿಣಾಮ ಪ್ರವಾಸಿಗರ ಸಂಖ್ಯೆ ಇಳಿಮುಖ ಆಗಿರಬಹುದು ಎಂದು ಕೆಲವರ ಅಭಿಪ್ರಾಯವಾಗಿದೆ. ಇನ್ನು ಆರ್ಥಿಕ ವರ್ಷಾಂತ್ಯದ ಹೊಸ್ತಿಲಿನಲ್ಲಿರುವುದರಿಂದ ಬಿಡುವಿನ ಕೊರತೆಯೂ ಪ್ರವಾಸಕ್ಕೆ ಅಡ್ಡಿಯಾಗಲು ಕಾರಣವಾಗಿದೆ. ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಹೋಂಸ್ಟೇ ರೆಸಾರ್ಟ್ ನಿರ್ವಹಣೆಯೇ ಸಂಕಷ್ಟವಾಗಿದೆ. ಅಲ್ಲದೇ ಪ್ರವಾಸಿಗರಿಂದ ಉಂಟಾಗುತ್ತಿದ್ದ ಹೋಟೆಲ್ ಅಂಗಡಿಗಳಲ್ಲಿನ ವ್ಯಾಪಾರವೂ ಕುಗ್ಗಿ ಹೋಗಿದ್ದು ಮೀನು ಮಾಂಸ ದಿನಸಿ ಅಂಗಡಿಗಳು ಸಹ ವ್ಯಾಪಾರ ಕುಸಿತ ಕಂಡಿವೆ.

ಶೃಂಗೇರಿಗೂ ಪ್ರವಾಸಿಗರಿಲ್ಲ ಶೃಂಗೇರಿ:

ಹೊಸ ವರ್ಷದಲ್ಲಿ ಶೃಂಗೇರಿಗೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ಇರುವವರಿಗೆ ರಜೆಗಳಿಲ್ಲ. ಮಕ್ಕಳ ವಿದ್ಯಾಭ್ಯಾಸ ಪರೀಕ್ಷೆಗಳು ಎದುರಾಗಿದ್ದರಿಂದ ಪ್ರವಾಸಿಗರು ಶೃಂಗೇರಿ ಬರುವವರು ಕಡಿಮೆಯಾಗಿದ್ದಾರೆ. ಇದರಿಂದ ಶೃಂಗೇರಿಯಲ್ಲಿರುವ ಶಾರದಾ ಪೀಠ ವಸತಿ ಗೃಹಗಳು ಹೋಂಸ್ಟೇ ಹೋಟೆಲ್ ಅಂಗಡಿಗಳಲ್ಲಿ ವಹಿವಾಟು ಕುಸಿದಿದೆ. ಕಳೆದ ವರ್ಷ ಜನವರಿ ಮತ್ತು ಫೆಬ್ರುವರಿಯಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿತ್ತು. ಆದರೆ ಈ ವರ್ಷ ತುಂಬಾ ಕಡಿಮೆಯಾಗಿದೆ. ಈ ರೀತಿ ಕಡಿಮೆಯಾದರೆ ವಸತಿ ಗೃಹಗಳನ್ನು ನಿರ್ವಹಣೆ ಮಾಡಲು ಕಷ್ಟ ಎಂದು ವಸತಿ ಗೃಹದ ನಿರ್ವಾಹಕ ಸುನಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಮ್ಮಣ್ಣುಗುಂಡಿ ಹೆಬ್ಬೆ ಜಲಪಾತಕ್ಕೂ ಪ್ರವಾಸಿಗರಿಲ್ಲ ತರೀಕೆರೆ:

ತಾಲ್ಲೂಕಿನ ಪ್ರೇಕ್ಷಣಿಯ ತಾಣಗಳಾದ ಕೆಮ್ಮಣ್ಣುಗುಂಡಿ ಕಲ್ಲತ್ತಿಗಿರಿ ಹೆಬ್ಬೆ ಜಲಪಾತ ಲಕ್ಕವಳ್ಳಿಯ ಭದ್ರಾ ಅಣೆಕಟ್ಟೆ ಸೇರಿ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ. ಮಕ್ಕಳ ಪರೀಕ್ಷೆ ಗ್ರಾಮಗಳಲ್ಲಿ ಹಬ್ಬ ಜಾತ್ರೆ ಮದುವೆ ಗೃಹ ಪ್ರವೇಶ ರೀತಿಯ ಸಮಾರಂಭಗಳು ನಡೆಯುತ್ತಿರುವುದರಿಂದ ಪ್ರವಾಸಿಗರು ಕಡಿಮೆಯಾಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಜಿಲ್ಲೆಗೆ ಭೇಟಿ ನೀಡುವಾಗ ಎಲ್ಲಾ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕು ಎಂಬ ಬಯಕೆ ಇರುತ್ತದೆ. ಆದರೆ ಮುಳ್ಳಯ್ಯನಗಿರಿಗೆ ಆನ್ಲೈನ್ ಬುಕ್ಕಿಂಗ್ ಮಾಡಿರುವುರಿಂದ ಬುಕ್ಕಿಂಗ್ ಲಭ್ಯವಾಗದೆ ಪ್ರವಾಸವನ್ನೇ ಕೈಬಿಡುತ್ತಿದ್ದಾರೆ. ಬದಲಾಗಿ ಕೊಡಗು ಸಕಲೇಶಪುರ ಊಟಿ ಮೈಸೂರು ಭಾಗಗಳಿಗೆ ಹೋಗುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೆಮ್ಮಣ್ಣುಗುಂಡಿಯ ಜಂಗಲ್ ರೆಸಾರ್ಟ್ ಮ್ಯಾನೇಜರ್ ರಜನಿಕಾಂತ್ ಹೇಳುತ್ತಾರೆ.

ರಸ್ತೆ ಕೂಡ ತೊಡಕು

ಚಿಕ್ಕಮಗಳೂರಿಗೆ ಬರುವ ರಸ್ತೆ ಕೂಡ ಸಂಪೂರ್ಣ ಹಾಳಾಗಿರುವುದು ಜಿಲ್ಲೆಗೆ ಬರುವ ಪ್ರವಾಸಿಗರನ್ನು ರೋಸಿ ಹೋಗುವಂತೆ ಮಾಡಿದೆ. ಬೆಂಗಳೂರಿನಿಂದ ಬರುವವರಿಗೆ ಹಾಸನ ತನಕ ನಾಲ್ಕು ಪಥದ ರಸ್ತೆ ಇದೆ. ಅಲ್ಲಿಂದ ಚಿಕ್ಕಮಗಳೂರು ನಗರಕ್ಕೆ 60 ಕಿಲೋ ಮೀಟರ್ ಪ್ರಯಾಣಿಸುವುದು ಪ್ರವಾಸಿಗರಿಗೆ ಪ್ರಯಾಸದ ಕೆಲಸ. ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಅಭಿವೃದ್ಧಿ ಕಂಡಿಲ್ಲ. ಹಾಸನದಿಂದ ಬೇಲೂರು ತನಕ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ಅರ್ಧಕ್ಕೆ ನಿಂತಿದೆ. ಬೇಲೂರಿನಿಂದ ಚಿಕ್ಕಮಗಳೂರು ತನಕ 24 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಯೋಜನೆ ಸಾಕಾರಗೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕು. ಸಮರ್ಪಕ ರಸ್ತೆ ಇಲ್ಲದಿರುವುದು ಕೂಡ ಪ್ರವಾಸಿಗರು ಮನಸು ಬದಲಾಯಿಸುವಂತೆ ಮಾಡಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.