ಮಂಗಳವಾರ, ಅಕ್ಟೋಬರ್ 15, 2019
28 °C

ಚಿಕ್ಕಮಗಳೂರಿನ ಬಿಳಿಕಲ್ಲು ಕೆರೆಯಲ್ಲಿ ಮೂವರು ನೀರುಪಾಲು

Published:
Updated:

ಚಿಕ್ಕಮಗಳೂರು: ನಗರದ ಗೃಹಮಂಡಳಿ ಬಡಾವಣೆಯ ಜೀವಿತ್ (14), ಮುರಳಿ (14) ಹಾಗೂ ಚಿರಾಗ್ (15) ಬಿಳಿಕಲ್ಲು ಕೆರೆಯಲ್ಲಿ ಈಜುವಾಗ ನೀರು ಪಾಲಾಗಿದ್ದಾರೆ.

ಸೋಮವಾರ ಆಯುಧ ಪೂಜೆ ಮುಗಿಸಿಕೊಂಡು ಮೂವರು ಮನೆಯಿಂದ ತೆರಳಿದ್ದರು. ಸಂಜೆಯಾದರೂ ಮನೆಗೆ ವಾಪಸ್ ಬರದಿದ್ದಾಗ ಪೋಷಕರು ಮಹಿಳಾ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಕೆರೆ ಏರಿಯಲ್ಲಿ ಸೈಕಲ್ ಮತ್ತು ಬಟ್ಟೆಗಳು ಇದ್ದವು. ಕಾರ್ಯಾಚರಣೆಯಲ್ಲಿ ಮೂರೂ ಶವಗಳನ್ನು ಹೊರತೆಗೆಯಲಾಗಿದೆ ಎಂದು ಡಿವೈಎಸ್ಪಿ ಬಸಪ್ಪ ಅಂಗಡಿ ತಿಳಿಸಿದ್ದಾರೆ.

Post Comments (+)