ಗುರುವಾರ , ಆಗಸ್ಟ್ 22, 2019
26 °C

ಚಿಕ್ಕಮಗಳೂರು: ರಸ್ತೆ ಮೇಲೆ ಗುಡ್ಡದ ಮಣ್ಣು, ಗಿರಿ ಮಾರ್ಗದಲ್ಲಿ ಸಂಚಾರ ಸ್ಥಗಿತ

Published:
Updated:

ಚಿಕ್ಕಮಗಳೂರು: ತಾಲ್ಲೂಕಿನ ಗಿರಿಶ್ರೇಣಿ ಮಾರ್ಗದಲ್ಲಿ ಭಾನುವಾರ ಮುಂಜಾನೆ ರಸ್ತೆಯ ಮೇಲೆ ಗುಡ್ಡದ ಮಣ್ಣು ಬಿದ್ದಿದ್ದು ಜಿಲ್ಲಾಧಿಕಾರಿ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಮಣ್ಣು ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಆರಂಭಿಸಿದೆ.

ಗಿರಿಶ್ರೇಣಿ ಮಾರ್ಗದ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ಪ್ರವಾಸಿಗರ ಸಂಚಾರವನ್ನು ಇದೇ 14ರವರೆಗೆ ನಿಷೇಧಿಸಲಾಗಿದೆ.

ಸತತ ಮಳೆಯಿಂದಾಗಿ ಗಿರಿ ಮಾರ್ಗದಲ್ಲಿ ಕೆಲವೆಡೆ ಗುಡ್ಡದ ಮಣ್ಣು ರಸ್ತೆಗೆ ಕುಸಿದಿದೆ, ಹೀಗಾಗಿ ಈ ಭಾಗಕ್ಕೆ ಪ್ರವಾಸಿಗರ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

 

 

Post Comments (+)