ಶುಕ್ರವಾರ, ಏಪ್ರಿಲ್ 3, 2020
19 °C

ಕೊಟ್ಟಿಗೆಹಾರ: ಚೀನಾದ ವ್ಯಕ್ತಿ ಕಂಡು ಬೆಚ್ಚಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟಿಗೆಹಾರ (ಚಿಕ್ಕಮಗಳೂರು): ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರಕ್ಕೆ ಬುಧವಾರ ಬಂದಿದ್ದ ಚೀನಾದ ಪುಂಜಿಮೊ ಎಂಬಾತನನ್ನು ಕಂಡು ಗ್ರಾಮಸ್ಥರು ಬೆಚ್ಚಿದ್ದಾರೆ. ವಾಸ್ತವ್ಯಕ್ಕೆ ಕೊಠಡಿ ನೀಡಲು ಲಾಡ್ಜ್‌ನವರು ನಿರಾಕರಿಸಿದ್ದು, ಆತ ಪೆಟ್ರೊಲ್‌ ಬಂಕ್‌ ಬಳಿ ಮಲಗಿ ಗುರುವಾರ ಬೆಳಗಿನ ಜಾವ ತೆರಳಿದ್ದಾರೆ. ದೇಶ ಪರ್ಯಟನೆ ಮಾಡುತ್ತಿರುವ ಪುಂಜಿಮೊ ಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ಬೈಕಿನಲ್ಲಿ ಬುಧವಾರ ರಾತ್ರಿ ಬಂದಿದ್ದಾರೆ. ವ್ಯಕ್ತಿ ಚೀನಾದವರು ಎಂದು ಗೊತ್ತಾಗಿ, ವಾಸ್ತವ್ಯಕ್ಕೆ ಕೊಠಡಿ ನೀಡಲು ಲಾಡ್ಜ್‌ನವರು ನಿರಾಕರಿಸಿದ್ದಾರೆ.

ಕೊಟ್ಟಿಗೆಹಾರ ಗೆಳೆಯರ ಬಳಗದ ಕಾರ್ಯದರ್ಶಿ ಅಶೋಕ್‍ ಮಲ್ಲಂದೂರು, ಇತರರು ಆ ವ್ಯಕ್ತಿ ಸಂಪರ್ಕಿಸಿ ಮುಖಗವಸು (ಮಾಸ್ಕ್‌) ಧರಿಸುವಂತೆ ಹೇಳಿದ್ದಾರೆ. ಪೊಲೀಸರು ಪುಂಜಿಮೊ ಅವರನ್ನು ವಿಚಾರಿಸಿದ್ದಾರೆ. ಕೊರೊನಾ ಸೋಂಕು ಇಲ್ಲದಿರುವ ಬಗ್ಗೆ ನೀಡಿರುವ ವೈದ್ಯಕೀಯ ಪ್ರಮಾಣಪತ್ರವನ್ನು ಆಗ ತೋರಿಸಿದ್ದಾರೆ. ವಾಸ್ತವ್ಯಕ್ಕೆ ಲಾಡ್ಜ್‌ನಲ್ಲಿ ಕೊಠಡಿ ದೊರೆಯದಿದ್ದರಿಂದ ಪೇಟೆಯ ಸನಿಹದ ಪೆಟ್ರೋಲ್ ಬಂಕ್‌ ಪಕ್ಕದಲ್ಲಿ ಗುಡಾರ ಛತ್ರಿ ಹಾಕಿಕೊಂಡು ಮಲಗಿದ್ದಾರೆ. ನಸುಕಿನಲ್ಲಿ ಬೈಕಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)