ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ ಬೌನ್ಸ್ ಪ್ರಕರಣ: ಕಾಂಗ್ರೆಸ್ ಮುಖಂಡ ಹರೀಶ್‌ಗೆ ದಂಡ

Published 16 ಜೂನ್ 2023, 7:08 IST
Last Updated 16 ಜೂನ್ 2023, 7:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಂಗ್ರೆಸ್‌ ಮುಖಂಡ ಬಿ.ಎಚ್‌.ಹರೀಶ್ ಅವರಿಗೆ ಚೆಕ್‌ ಬೌನ್ಸ್ ಪ್ರಕರಣದಲ್ಲಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತಲಾ ₹5 ಸಾವಿರ ದಂಡ ವಿಧಿಸಿದೆ.

ನಗರದ ಕೋಟೆ ಬಡಾವಣೆಯ ಸಿ.ಎಚ್‌.ವೆಂಕಟನಾರಾಯಣರೆಡ್ಡಿ ಎಂಬುವರ ಬಳಿ 2018ರಲ್ಲಿ ₹1.10 ಕೋಟಿ ಸಾಲ ಪಡೆದಿದ್ದರು. ಸಾಲಕ್ಕೆ ₹50 ಲಕ್ಷ ಮತ್ತು ₹60 ಲಕ್ಷದ ಎರಡು ಚೆಕ್‌ಗಳನ್ನು ನೀಡಿದ್ದರು. ಆ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿದ್ದ ಹರೀಶ್‌ ಅವರು, ವಿಧಾನಸಭೆ ಚುನಾವಣೆಗೂ ಸ್ಪರ್ಧೆ ಮಾಡಿದ್ದರು.

ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡದಿದ್ದರಿಂದ ವೆಂಕಟರಮಣರೆಡ್ಡಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಗುರುವಾರ ಆದೇಶ ಹೊರಡಿಸಿದೆ. 

ಐದು ವರ್ಷ ಸಾಲ ಮರುಪಾವತಿ ಮಾಡದಿರುವುದಕ್ಕೆ ಬಡ್ಡಿ ಸೇರಿಸಿ ಪ್ರತಿ ಚೆಕ್‌ಗೆ ಕ್ರಮವಾಗಿ ‌₹65 ಲಕ್ಷ ಮತ್ತು ₹78 ಲಕ್ಷ ಮರುಪಾವತಿ ಮಾಡಬೇಕು. ಜತೆಗೆ ತಲಾ ₹5 ಸಾವಿರ ದಂಡ ಪಾವತಿಸಬೇಕು. ಪಾವತಿಸಲು ಸಾಧ್ಯವಾಗದಿದ್ದರೆ ಎರಡೂ ಪ್ರಕರಣದಲ್ಲಿ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ದೂರವಾಣಿ ಮೂಲಕ ಹರೀಶ್ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT