ನರಸಿಂಹರಾಜಪುರ: ದಲಿತರಿಗೆ ಭೂಮಿ ಮಂಜೂರು ಮಾಡಿಕೊಡದಿದ್ದರೆ ಫೆ.16ರಿಂದ ಅಹೋರಾತ್ರಿ ಅನಿರ್ದಿಷ್ಟಕಾಲ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ) ಸ್ಥಾಪಿತ ನರಸಿಂಹರಾಜಪುರ ತಾಲ್ಲೂಕು ಸಮಿತಿ ಹೇಳಿದೆ.

ಈ ಸಂಬಂಧ ಸೋಮವಾರ ತಹಶೀಲ್ದಾರ್ ನೂರುಲ್ ಹುದಾ ಅವರಿಗೆ ಮನವಿ ಸಲ್ಲಿಸಿದೆ. ರಾವೂರು, ಶಿರಗಳಲೆ, ನಾಗಲಾಪುರ ಗ್ರಾಮಗಳ ನಿರ್ದಿಷ್ಟ ಸರ್ವೆ ನಂಬರ್ನಲ್ಲಿ ದಲಿತರ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಭೂಹೀನ ದಲಿತರಿಗೆ ಭೂಮಿ ಮಂಜೂರಿ ಮಾಡಿಕೊಡಲು 2010 ಮಾರ್ಚ್ 2ರಂದು ಆಗಿರುವ ಆದೇಶದಂತೆ ಇಲ್ಲಿ ಸ್ಥಳ ಪರಿಶೀಲನೆ ಮಾಡಿ ನಕ್ಷೆ ತಯಾರಿಸಲಾಗಿದೆ. ಇದರ ಪ್ರಕಾರ ಕಡತ ತಯಾರಿಸಿ, ಜಮೀನು ಮಂಜೂರು ಮಾಡಿಕೊಡಲು ಕೋರಿ 2025 ಅಕ್ಟೋಬರ್ 4ರಂದು ಮನವಿ ನೀಡಲಾಗಿತ್ತು. ತಪ್ಪಿದಲ್ಲಿ ಡಿಸೆಂಬರ್ 7ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ, ನಮ್ಮ ಬೇಡಿಕೆಯ ಬಗ್ಗೆ ಯಾವುದೇ ಪ್ರಗತಿ ಆಗಿಲ್ಲ. ಇನ್ನಾದರೂ ಜಮೀನು ಮಂಜೂರು ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ತಾಲ್ಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ದಲಿತ ಸಂಘರ್ಷ ಸಮಿತಿಯ ತರೀಕೆರೆ ಎನ್.ವೆಂಕಟೇಶ್, ಎಂ.ವಿ.ಭವಾನಿ, ಎಸ್.ರಾಜೇಶ್, ಎಂ.ಜೆ.ಸಿಜು, ಅಬ್ದುಲ್ ರೆಹಮಾನ್, ಎಸ್.ರಾಜು, ಜೈರಾಮ್, ಸೈಯದ್ ಖದೀರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.