ಚಿಕ್ಕಮಗಳೂರು: ಡಿ.10ರಿಂದ ದತ್ತ ಜಯಂತ್ಯುತ್ಸವ
ಚಿಕ್ಕಮಗಳೂರು: ಈ ಬಾರಿ ದತ್ತ ಜಯಂತ್ಯುತ್ಸವ ಡಿ.10ರಿಂದ 12ರವರೆಗೆ ನಡೆಯಲಿದೆ ಎಂದು ಬಜರಂಗದಳ ಸಹ ಸಂಯೋಜಕ ರಘು ಸಕಲೇಶಪುರ ಇಲ್ಲಿ ಮಂಗಳವಾರ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ದಳ ವತಿಯಿಂದ ದತ್ತ ಜಯಂತ್ಯುತ್ಸವ ಸಂಘಟಿಸಲಾಗಿದೆ. ಡಿ.1ರಂದು ದತ್ತಮಾಲೆ ಧಾರಣೆ ಕೈಂಕರ್ಯ, 10ರಂದು ಅನಸೂಯಾ ಜಯಂತ್ಯುತ್ಸವ, 11ರಂದು ನಗರದಲ್ಲಿ ಶೋಭಾ ಯಾತ್ರೆ ಹಾಗೂ 12ರಂದು ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿನ ಗುಹೆಯಲ್ಲಿ ದತ್ತಪಾದುಕೆ ದರ್ಶನ ಜರುಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಕ್ರಿಯಿಸಿ (+)