ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು | ಅಭಿವೃದ್ಧಿ ನಿರೀಕ್ಷೆಯಲ್ಲಿ ಗೌತಮೇಶ್ವರ ದೇವಾಲಯದ ರಸ್ತೆ

Published 19 ನವೆಂಬರ್ 2023, 6:21 IST
Last Updated 19 ನವೆಂಬರ್ 2023, 6:21 IST
ಅಕ್ಷರ ಗಾತ್ರ

ಜೋಸೆಫ್.ಎಂ.ಆಲ್ದೂರು

ಆಲ್ದೂರು: ಸಾವಿರಾರು ವರ್ಷಗಳ ಇತಿಹಾಸ ಇರುವ ಸಮೀಪದ ಕೂದುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌತಮೇಶ್ವರ ಗ್ರಾಮದ ಗೌತಮೇಶ್ವರ ದೇವಸ್ಥಾನದ ಮಾರ್ಗವು ಅಭಿವೃದ್ಧಿ ಕಾಣದೆ ಹಲವು ವರ್ಷಗಳಾಗಿವೆ.

ಆಲ್ದೂರಿನಿಂದ 6 ಕಿ.ಮೀ ದೂರದಲ್ಲಿರುವ ಕ್ಷೇತ್ರವು ಗೌತಮ ಮುನಿಗಳ ತಪೋವನವಾಗಿದ್ದು, ಅವರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ ಎನ್ನುತ್ತಾರೆ ಅರ್ಚಕ ಶೇಷಾಚಲ ಭಟ್.

ಹಿಂದೆ ಮೋಟಮ್ಮ ಅವರು ಶಾಸಕರಾಗಿದ್ದ ಅವಧಿಯಲ್ಲಿ ದೇವಾಲಯದ ಜೀರ್ಣೋದ್ಧಾರಕ್ಕೆ ₹5 ಲಕ್ಷ ಮಂಜೂರು ಮಾಡಿದ್ದರು.  ಆದರೆ, ಇನ್ನೂ ಕೂಡ ದೇವಾಲಯಕ್ಕೆ ತೆರಳಲು ಉತ್ತಮವಾದ ರಸ್ತೆ ಇಲ್ಲ. ಕಿಡಿಗೇಡಿಗಳು ಕಲ್ಲಿನ ಕಂಬಗಳ ಮೇಲೆ ಹೆಸರು ಬರೆದು, ಶಿಲ್ಪಕಲೆಯನ್ನು ಹಾಳು ಮಾಡುತ್ತಿದ್ದಾರೆ.

ಸಿ.ಟಿ.ರವಿ ಪ್ರವಾಸೋದ್ಯಮ ಸಚಿವರಾಗಿದ್ದಾಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹1 ಕೋಟಿ ಅನುದಾನ ಒದಗಿಸಿದ್ದು, ಅಡಿಪಾಯದಿಂದ ಶಿಖರದವರೆಗೆ ಪುನರ್ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲಿ ದೇವಸ್ಥಾನ ಪ್ರಾರಂಭೋತ್ಸವ ನಡೆಯಲಿದೆ. ಆದರೆ, ಇಲ್ಲಿ ತಲುಪುವ 1.5 ಕಿ.ಮೀ ರಸ್ತೆ ತೀರಾ ದುಃಸ್ಥಿತಿಯಲ್ಲಿದ್ದು, ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ದೇವಸ್ಥಾನ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಮನೋಹರ್, ಕೇಶವಮೂರ್ತಿ, ಶಶಿಧರ್, ಸುಬ್ಬೆಗೌಡ, ಅರ್ಚಕ ಪೋಸ್ಟ್ ಮ್ಯಾನ್ ಚಂದ್ರಣ್ಣ, ನಾರಾಯಣಗೌಡ ಒತ್ತಾಯಿಸಿದ್ದಾರೆ.

ಗೌತಮೇಶ್ವರ ರಸ್ತೆ ಅಭಿವೃದ್ಧಿಯನ್ನು ಪಂಚಾಯಿತಿಯಿಂದ ಮಾಡಲು ಅನುದಾನದ ಕೊರತೆಯಿದ್ದು, ಶಾಸಕರಿಗೆ ಪತ್ರದ ಮೂಲಕ ಮನವಿ ಮಾಡಲಾಗುವುದು ಎಂದು ಕೂದುವಳ್ಳಿ ಪಂಚಾಯಿತಿ ಪಿಡಿಒ ಹನುಮಂತ ಶೆಟ್ಟಿ ಹೇಳಿದರು.

ಮುಂದಿನ ದಿನಗಳಲ್ಲಿ ದೇವಸ್ಥಾನದ ರಸ್ತೆಗೆ ಅನುದಾನ ನೀಡಿ, ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯಿಸಿದರು.

ಸಂಪೂರ್ಣ ಹದಗೆಟ್ಟಿರುವ ಗೌತಮೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ
ಸಂಪೂರ್ಣ ಹದಗೆಟ್ಟಿರುವ ಗೌತಮೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ
ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿರುವ ದೇವಸ್ಥಾನದ ಆವರಣದಲ್ಲಿರುವ ವಾಸ್ತುಶಿಲ್ಪ
ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿರುವ ದೇವಸ್ಥಾನದ ಆವರಣದಲ್ಲಿರುವ ವಾಸ್ತುಶಿಲ್ಪ

Cut-off box - ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧಿ ಅತೀಂದ್ರ ಶಕ್ತಿಯ ಕೇಂದ್ರವಾಗಿರುವ ಕ್ಷೇತ್ರವು ಇಷ್ಟಾರ್ಥ ಸಿದ್ದಿಗೆ ಪ್ರಸಿದ್ಧಿಯಾಗಿದೆ. ಹೊಯ್ಸಳರ ಕಾಲದ ಮಂಟಪ ಮತ್ತು ವಾಸ್ತುಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ದೇವಸ್ಥಾನದ ಸಮೀಪ ಪ್ರಾಚ್ಯ ಅವಶೇಷಗಳು ಶಾಸನ ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT