ಕಡೂರು: ವಿದ್ಯುತ್ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿ ಕಾಮಗಾರಿ ಮುಗಿಸಿದರೂ ಅವರಿಗೆ ಸರಿಯಾದ ಸಮಯದಲ್ಲಿ ಬಿಲ್ ಪಾವತಿಸದೇ ತೀವ್ರ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ (ಕರಾಅಪವಿಗುಸಂ) ಜಿಲ್ಲಾ ಉಪಾಧ್ಯಕ್ಷ ನರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರಿಗೆ ಪ್ರತಿತಿಂಗಳು ಎರಡು ಹಂತದಲ್ಲಿ ಬಿಲ್ ಪಾವತಿಸುವಂತೆ ಮೆಸ್ಕಾಂ ಎಂ.ಡಿ.ಜಯಕುಮಾರ್ ಆದೇಶ ನೀಡಿದ್ದರು. ಆದರೆ, ಅವರ ಆದೇಶದಂತೆ ಬಿಲ್ ಪಾವತಿ ಮಾಡುತ್ತಿಲ್ಲ. ಇದರಿಂದ 15ಕ್ಕೂ ಹೆಚ್ಚು ಗುತ್ತಿಗೆದಾರರು ತೀವ್ರ ತೊಂದರೆಗೊಳಗಾಗಿದ್ದಾರೆ. ಈ ಕುರಿತು ಆರ್ಥಿಕ ಸಲಹೆಗಾರ (ಸಿ.ಎಫ್.ಒ) ಹರೀಶ್ಚಂದ್ರ ಅವರನ್ನು ಕೇಳಿದರೆ ಅನುದಾನ ಬಂದಿಲ್ಲ, ರೆವಿನ್ಯೂ ಸಂಗ್ರಹವಾಗಿಲ್ಲ. ಆದ ನಂತರ ಬಿಲ್ ಕೊಡುತ್ತೇವೆ ಎಂದು ಉಡಾಫೆಯಾಗಿ ಮಾತನಾಡುತ್ತಾರೆ. ಹೀಗಾದರೆ ನಾವು ಜೀವನ ನಡೆಸುವುದು ಹೇಗೆ. ಕೂಡಲೇ ವಿದ್ಯುತ್ ಗುತ್ತಿಗೆದಾರರಿಗೆ ನೀಡಬೇಕಾದ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ರಮೇಶ್ ಮಾತನಾಡಿ, ಗುತ್ತಿಗೆದಾರರು ಸ್ವಂತ ಹಣದಿಂದ ಕಾಮಗಾರಿ ಮಾಡಿರುತ್ತಾರೆ. ದುಬಾರಿ ಬಡ್ಡಿ ನೀಡಿ ಸಾಲ ಮಾಡಿ ಹಣ ತಂದಿರುತ್ತಾರೆ. ಎಸ್.ಇ.ಪಿ, ಟಿ.ಎಸ್.ಪಿ, ಗಂಗಾ ಕಲ್ಯಾಣ, ಕುಡಿಯುವ ನೀರು, ಬ್ರೇಕ್ ಡೌನ್ ಕಾಮಗಾರಿ ಮುಂತಾದ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದ್ದರೂ ಅಧಿಕಾರಿಗಳಿಗೆ ಅದು ಗಣನೆಗೆ ಬಾರದಂತಾಗಿದೆ. ಇಲ್ಲಿನ ಗುತ್ತಿಗೆದಾರರೊಬ್ಬರಿಗೆ ಕಾಮಗಾರಿ ಮುಗಿಸಿ ಮೂರು ತಿಂಗಳಾದರೂ ಹಣ ಪಾವತಿಸಿಲ್ಲ. ಕೂಡಲೇ ಸಂಬಂಧಿಸಿದ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಅರ್ಥೈಸಿಕೊಂಡು ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇದೇ ಪರಿಪಾಠ ಮುಂದುವರೆದರೆ ಸಂಘದ ಮೂಲಕ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮರಿಯಾ ರಾಜ್ ಮತ್ತು ಸಂಘದ ವಿವಿಧ ತಾಲ್ಲೂಕು ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.