ಮೂಡಿಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 125 ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿ ಪ್ರಮಾಣ ಪತ್ರವನ್ನು ಯೋಜನಾ ನಿರ್ದೇಶಕ ಶಿವಾನಂದ ವಿತರಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಯನ ತಳವಾರ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ಕಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಾಗಿ ನೀಡಿರುವ ಈ ಮೊತ್ತವನ್ನು ಆ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು’ ಎಂದರು.
ಹಾಸ್ಯ ಕಲಾವಿದ ರಮೇಶ್ ಯಾದವ್ ಕಾರ್ಯಕ್ರಮ ಉದ್ಘಾಟಿಸಿದರು. ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವು ಶ್ಲಾಘನೀಯ’ ಎಂದರು.
ಯೋಜನಾ ನಿರ್ದೇಶಕ ಶಿವಾನಂದ ಮಾತನಾಡಿ, ‘ಯೋಜನೆಯಡಿ ಉನ್ನತ ವ್ಯಾಸಂಗಕ್ಕಾಗಿ ಮಾಸಿಕ ₹400 ರಿಂದ ₹1 ಸಾವಿರ ಶಿಷ್ಯವೇತನ್ನು ನೀಡಲಾಗುತ್ತಿದೆ’ ಎಂದರು.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲ್ಲೂಕಿನ ಮಾಸ್ಟರ್ ಪ್ರವೀಣ್ ಪೂಜಾರಿ, ನಾಯಕ ಕೆ.ಎಲ್. ರವಿ, ಅವಿನಾಶ್, ಭಾರತಿ, ಇದ್ದರು.