ಮೂಡಿಗೆರೆ: ಪ್ರಕೃತಿಯಲ್ಲಿ ಎಲ್ಲಾ ಜೀವರಾಶಿಗಳು ಬದುಕುಬೇಕೆಂದರೆ ಅಳಿವಿನಂಚಿನಲ್ಲಿರುವ ಮಳೆ ಕಾಡುಗಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಹೇಳಿದರು.

ತಾಲ್ಲೂಕಿನ ಬಿದರಹಳ್ಳಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಳೆ ಕಾಡುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವನ ಸ್ವಾರ್ಥದಿಂದಾಗಿ ಪ್ರಕೃತಿ ಮೇಲೆ ನಿರಂತರ ದಾಳಿಯಾಗುತ್ತಿದೆ. ಇದರಿಂದ ಹವಾಮಾನದ ಸಮತೋಲನದಲ್ಲಿ ಏರುಪೇರು ಉಂಟಾಗಿ, ಮುಂದಿನ ಪೀಳಿಗೆಯು ಅಪಾಯದಲ್ಲಿ ಸಿಲುಕುವ ಸಾಧ್ಯತೆಯಿದೆ. ಹಾಗಾಗಿ ಸಮತೋಲನ ಕಾಪಾಡಲು ಕಾಡುಗಳ ರಕ್ಷಣೆ ಅಗತ್ಯವಾಗಿದೆʼ ಎಂದು ಹೇಳಿದರು.

ಎಸಿಎಫ್ ಕೆ.ಎಸ್.ಮೋಹನ್ ಮಾತನಾಡಿ, ‘ಕಾಡನ್ನು ರಕ್ಷಿಸದಿದ್ದರೆ ನಮ್ಮ ವಾತಾವರಣ ಹಾಗೂ ಸಮಾಜಕ್ಕೆ ಪ್ರಯೋಜನಕಾರಿಯಾದ ಅನೇಕ ಸಸ್ಯ ಹಾಗೂ ಪ್ರಾಣಿಗಳನ್ನು ಕಳೆದುಕೊಳ್ಳುತ್ತೇವೆ. ಅಲ್ಲದೇ ಪ್ರಕೃತಿಯಲ್ಲಿನ ಅಸಮತೋಲದಿಂದಾಗಿ ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಈಗಾಗಲೇ ಬಹಳಷ್ಟು ವ್ಯತ್ಯಾಸ ಕಾಣುತ್ತಿದ್ದೇವೆ. ಆದ್ದರಿಂದ ಹವಾಮಾನ ಸಮತೋಲನಕ್ಕೆ ಅರಣ್ಯ ರಕ್ಷಿಸುವ ಜತೆಗೆ ಪ್ರತಿ ಮನೆಯಲ್ಲಿಯೂ ಒಂದೊಂದು ಗಿಡ ಬೆಳಸಿ ಪೋಷಿಸಬೇಕುʼ ಎಂದು ಮನವಿ ಮಾಡಿದರು.

ವಲಯ ಅರಣ್ಯಾಧಿಕಾರಿ ಎಸ್.ಪಿ.ಕಾವ್ಯ, ಬಿದರಹಳ್ಳಿ ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಬಿ.ಟಿ.ವೆಂಕಟೇಶ್, ಬಾಳೂರು ಇಂದಿರಾಗಾಂಧಿ ವಸತಿಶಾಲೆ ಪ್ರಾಂಶುಪಾಲ ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.