ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಗುಹೆಯಲ್ಲಿ ವಾಸಿಸುತ್ತಿರುವ ಗಿರಿಜನ ಕುಟುಂಬ!

ಕಳೆದ ವರ್ಷ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಸಿಕ್ಕಿಲ್ಲ ಸೂರು
Last Updated 23 ಏಪ್ರಿಲ್ 2020, 1:16 IST
ಅಕ್ಷರ ಗಾತ್ರ
ADVERTISEMENT
""

ಬಲಿಗೆ (ಬಾಳೆಹೊನ್ನೂರು): ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಮನೆ ಕಳೆದುಕೊಂಡ ಗಿರಿಜನ ಕುಟುಂಬವೊಂದು ಸರ್ಕಾರದ ಯಾವುದೇ ಸೌಲಭ್ಯ ಸಿಗದೆ, ಕಲ್ಲಿನ ಗುಹೆಯಲ್ಲೇ ಬದುಕು ಸಾಗಿಸುತ್ತಿದೆ.

ಮೂಡಿಗೆರೆ ತಾಲ್ಲೂಕಿನ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೆರೆ ಗ್ರಾಮದ ಕಲ್ಲಕ್ಕಿಯಲ್ಲಿದ್ದ ಅನಂತ ಎಂಬುವವರ ಮನೆ ಮಳೆಯಿಂದಾಗಿ ಸಂಪೂರ್ಣ ಕುಸಿದು ಬಿದ್ದಿತ್ತು. ಸುತ್ತಮುತ್ತಲಿನ ಕನಿಷ್ಠ ನಾಲ್ಕು ಕಿ.ಮೀ. ಅಂತರದಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಕಂಗಾಲಾದ ಕುಟುಂಬ ಅಲ್ಲಿಯೇ ಸಮೀಪದಲ್ಲಿದ್ದ ಕಲ್ಲಿನ ಗುಹೆಯೊಂದರಲ್ಲಿ ಆಶ್ರಯ ಪಡೆದಿದೆ.

ಅನಂತ ಅವರೊಂದಿಗೆ ಅವರ ಪತ್ನಿ ಅನ್ನಪೂರ್ಣಾ, ಮಗಳು ಅಮೃತಾ ಹಾಗೂ ಮಗ ಅವಿನಾಶ್ ಕೂಡ ಇದ್ದಾರೆ. ಗುಹೆಯ ಅಂಚಲ್ಲಿ ಸುಮಾರು ಐವತ್ತು ಅಡಿ ಆಳದ ಕಂದಕ ಇದೆ. ಕ್ಯಾತನಮಕ್ಕಿ ಸಮೀಪದ ಮೆಣಸಿನಹಾಡ್ಯ ಗಿರಿಜನ ಆಶ್ರಮ ಶಾಲೆಯಲ್ಲಿ ಅಮೃತಾ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಐದು ವರ್ಷದ ಮಗ ಅವಿನಾಶ್‌ನನ್ನು ಕೆಲ ದಿನಗಳ ಹಿಂದೆ ಸಂಬಂಧಿಕರೊಬ್ಬರ ಮನೆಯಲ್ಲಿ ಬಿಡಲಾಗಿದೆ.

‘ಭಾರಿ ಮಳೆಯಿಂದ ಮನೆ ಬಿದ್ದು ಹೋಗಿದೆ. ಯಾರೂ ಪರಿಹಾರ ಕೊಟ್ಟಿಲ್ಲ. ಇರೋ ಜಮೀನಿನಲ್ಲಿ ಉತ್ಪತ್ತಿ ಇಲ್ಲ. ಕೂಲಿ ಸಿಕ್ರೆ ಮಾಡ್ತಿನಿ, ಇಲ್ಲಾ ಅಂದ್ರೆ ಇಲ್ಲಿ ಸಿಗೋ ಕಾಡುಹಣ್ಣುಗಳನ್ನು ತಿಂತೀವಿ’ ಎನ್ನುತ್ತಾರೆ ಅನಂತ.

‘ಸಾವಿರಾರು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಪರ್ವತ ಶ್ರೇಣಿಯ ನಡುವೆ ಈ ಕುಟುಂಬದ ಸದಸ್ಯರು ಎಲ್ಲಿದ್ದಾರೆಂದು ಹುಡುಕುವುದೇ ಸವಾಲು’ ಎಂದು ರೈತ ಸಂಘದ ಮುಖಂಡ ಸವಿಂಜಯ ಆಗ್ರಹಿಸಿದ್ದಾರೆ.

ಕಳೆದ ವರ್ಷದ ಮಳೆಗೆ ಬಿದ್ದು ಹೋಗಿರುವ ಮನೆ

ಆಹಾರ ಧಾನ್ಯ ನೀಡಲು ಕ್ರಮ: ಎಸ್ಪಿ

‘ಅನಂತ ಅವರ ಕುಟುಂಬ ಪರ್ವತ ಶ್ರೇಣಿಯಿಂದ ಹೊರಗಡೆ ಬರುವುದಾದಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಬದ್ಧವಾಗಿದೆ. ತಕ್ಷಣಕ್ಕೆ ಅವರಿಗೆ ಬೇಕಾದ ಆಹಾರ ಧಾನ್ಯಗಳನ್ನು ಕೊಡಲು ವ್ಯವಸ್ಥೆ ಮಾಡುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಮಕ್ಕಳ ದತ್ತು ಪಡೆಯಲು ಟ್ರಸ್ಟ್‌ ನಿರ್ಧಾರ

ಉಡುಪಿ ಮೂಲದ ಬೆಂಗಳೂರಿನ ಸಮರ್ಪಣಾ ಚಾರಿಟಬಲ್ ಟ್ರಸ್ಟ್ ಅನಂತ ಅವರ ಕುಟುಂಬದ ಕಥೆ ಕೇಳಿ ಅವರ ಇಬ್ಬರು ಮಕ್ಕಳನ್ನು ದತ್ತು ಪಡೆಯಲು ನಿರ್ಧರಿಸಿದೆ. ಟ್ರಸ್ಟ್ ಪರವಾಗಿ ಸ್ಥಳಕ್ಕೆ ಭೇಟಿ ನೀಡಿದ ದೀಪಾ ಶೆಟ್ಟಿ, ಲೋಹಿತ್ ಶೆಟ್ಟಿ, ಸಂದೀಪ್ ಶೆಟ್ಟಿ ‘ಇಬ್ಬರು ಮಕ್ಕಳು ಎಷ್ಟು ಓದುತ್ತಾರೋ ಅಲ್ಲಿಯವರೆಗೆ ಅವರ ಖರ್ಚು ವೆಚ್ಚಗಳನ್ನು ಟ್ರಸ್ಟ್ ನೋಡಿಕೊಳ್ಳಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT