ಕೊಪ್ಪ(ಚಿಕ್ಕಮಗಳೂರು): ಪಟ್ಟಣದಲ್ಲಿ ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಿರುವ ಸರಸ್ವತಿ ಅವರು ತಾಲ್ಲೂಕಿನ ಸೂರ್ಯದೇವಸ್ಥಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ₹20 ಸಾವಿರಕ್ಕೂ ಅಧಿಕ ಮೊತ್ತದ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ.

ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ಪೌಚ್, ಶಾಲಾ ಬ್ಯಾಗ್ ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಿತರಿಸಿದರು.

ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾಗಿರುವ ಶಿಕ್ಷಕ ಸುಕೇಶ್ ಮಾತನಾಡಿ, ‘ನಾವು ರೋಟರಿ ಕ್ಲಬ್ ವತಿಯಿಂದ ಈ ಹಿಂದೆ ಸರಸ್ವತಿ ಅವರಿಗೆ ಸಣ್ಣ ಸಹಾಯ ಮಾಡಿದ್ದೆವು. ಆದರೆ, ಅವರು ನಮ್ಮ ಶಾಲೆಗೆ ಅದರ ದುಪ್ಪಟ್ಟು ಮೌಲ್ಯದ ಕೊಡುಗೆ ನೀಡುವ ಮೂಲಕ ಸಮಾಜದ ಋಣ ತೀರಿಸಿದ್ದಾರೆ’ ಎಂದರು.

ಸರಸ್ವತಿ ಅವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು.

ಶಿಕ್ಷಣ ಸಂಪನ್ಮೂಲ ಕಚೇರಿಯ ಸುನೀತಾ, ಸಿಆರ್ಪಿ ಮಹಾಲಕ್ಷ್ಮಿ ಭಟ್, ಸ್ಥಳೀಯರಾದ ಕರುಣಾಕರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್, ಮುಖ್ಯ ಶಿಕ್ಷಕಿ ಮಲ್ಲಿಕಾ, ಸಹ ಶಿಕ್ಷಕಿ ಮೇಘನಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಾಗರತ್ನಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.