ನರಸಿಂಹರಾಜಪುರ: ತಾಲ್ಲೂಕಿನ ಮುತ್ತಿನಕೊಪ್ಪ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು ಸರ್ಕಾರ ಅನುಮತಿ ನೀಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ತಾಲ್ಲೂಕಿನ ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯ ದ್ವಾರಮಕ್ಕಿ, ಕೋಟೇಬೈಲು, ಗುಡ್ಡದಮನೆ, ಮಳಲಿ, ನೇರಲೇಕೊಪ್ಪ ಹಾಲಂದೂರು, ಗಾಂಧಿಗ್ರಾಮ, ಬಣಗಿ ಮತ್ತು ಮಡಬೂರು ಗ್ರಾಮಗಳಲ್ಲಿ ರೈತರ ಆಸ್ತಿಗಳನ್ನು ನಷ್ಟ ಉಂಟು ಮಾಡುತ್ತಿರುವ ಹಾಗೂ ಸಾರ್ವಜನಿಕರ ಜೀವಕ್ಕೆ ತೊಂದರೆ ನೀಡುತ್ತಿರುವ ಒಂಟಿ ಸಲಗ ಸೆರೆ ಹಿಡಿಲು ಅನುಮತಿ ದೊರೆತಿದೆ ಎಂದರು.

ತಾಲ್ಲೂಕಿನ ಮೇಲ್ಪಾಲ್, ಕಾನೂರು, ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿರುವ ಒಂಟಿ ಸಲಗವನ್ನು ಪಳಗಿದ ಆನೆಗಳನ್ನು ಬಳಸಿ ಅರಣ್ಯ ಓಡಿಸಲು ಪ್ರಯತ್ನಿಸಲಾಗುವುದು. ಪುನಃ ಹಿಂದಿರುಗಿ ಬಂದರೆ ಇದನ್ನು ಸೆರೆಹಿಡಿಯಲು ಮನವಿ ಸಲ್ಲಿಸಲಾಗುವುದು ಎಂದರು.

ತಾಲ್ಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಇಲಾಖೆಯಿಂದ ಅನುಮತಿ ದೊರೆತಿದ್ದು, ಭಾನುವಾರ ಸಕ್ರೇಬೈಲ್ ಆನೆ ಬಿಡಾರದ ನುರಿತ ಆನೆಗಳು ಬರಲಿದ್ದು ಸೋಮವಾರ ಬೆಳಿಗ್ಗೆಯಿಂದ ಒಂಟಿ ಸಲಗ ಸೆರೆಹಿಡಿಯುವ ಕಾರ್ಯಾರಣೆ ಆರಂಭಿಸಲಾಗುವುದು ಎಂದು ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.