ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಳೆಹೊನ್ನೂರು | ಬಾಲರಾಮ ಪ್ರತಿಷ್ಠೆ ನೆನಪಿಗೆ ಗೋಶಾಲೆ ನಿರ್ಮಾಣ

Published 24 ಜನವರಿ 2024, 13:46 IST
Last Updated 24 ಜನವರಿ 2024, 13:46 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ಸವಿನೆನಪಿಗಾಗಿ, ಇಲ್ಲಿನ ಕಾಮಧೇನು ಗೋ ಸೇವಾ ಟ್ರಸ್ಟ್ ವತಿಯಿಂದ ನೂತನ ಗೋಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ’ ಎಂದು ಟ್ರಸ್ಟ್ ಮುಖ್ಯಸ್ಥ ನಾಗೇಶ್ ಆಂಗೀರಸ ಹೇಳಿದರು.

ದೇವಗೋಡು ಗ್ರಾಮದ ಕೆಮ್ಮಣ್ಣು-ನೀರ್ಕಟ್ಟುವಿನಲ್ಲಿ ಗೋ ಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಭಾರತದ ಇನ್ನೊಂದು ಮುಖ ಗೋವು. ಗೋವು ಇಲ್ಲದ ಭಾರತವನ್ನು ಊಹಿಸಲು ಸಾಧ್ಯವಿಲ್ಲ.ದೇಸಿ ಗೋವುಗಳನ್ನು ಮತ್ತು ಹಿಂದೂ ಧರ್ಮದ ತಳ ಸಮುದಾಯ, ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸುವ ಕೆಲಸವಾಗಬೇಕಿದೆ’ ಎಂದರು.

ಹಿಂದುಳಿದ, ತಳ ಸಮುದಾಯಗಳ ಮುಖಂಡರಾದ ಅಪ್ಪಿ ಪೂಜಾರ್ತಿ, ಕಿಟ್ಟಿನಾಯ್ಕ, ಗೋಪಾಲಯ್ಯ ಶಂಕರಕೊಡಿಗೆ, ದೇವಪ್ಪ ಆಚಾರ್, ಗೋಪಾಲಯ್ಯ ಮುಜೇಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗೋ ಶಾಲೆಯ ಮುಖ್ಯಸ್ಥರಾದ ಸುಮಾ ನಾಗೇಶ್, ಶ್ರೀರಾಮ್ ಆಂಗೀರಸ, ಗ್ರಾಪಂ ಸದಸ್ಯೆ ಅನುಪಮಾ, ಪ್ರಮುಖರಾದ ಕೆ.ವಿ.ದಿನೇಶ್ ಚಂದ್ರಗಿರಿ, ಲಕ್ಷ್ಮೀನಾರಾಯಣ, ಗೋಪಾಲಕೃಷ್ಣ, ನೀರ್ಕಟ್ಟು ಹರೀಶ್, ಶ್ಯಾಮ ಮೇಸ್ತ್ರಿ, ಸರೋಜಾ, ಕೃಷ್ಣಮೂರ್ತಿ, ಪ್ರಶಾಂತ್, ನಯನಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT