ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ: ರೇವಣ್ಣ

Published 13 ಜೂನ್ 2024, 14:25 IST
Last Updated 13 ಜೂನ್ 2024, 14:25 IST
ಅಕ್ಷರ ಗಾತ್ರ

ಕಡೂರು: ವಿರೋಧಿಗಳು ಏನೇ ಟೀಕೆ ಮಾಡಲಿ. ಜನತೆಗೆ ನೆಮ್ಮದಿಯ ಬದುಕು ನೀಡುವುದು ನಮ್ಮ ದೃಷ್ಟಿ. ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಯೋಚನೆ ಇಲ್ಲ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಕಡೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿದೆ ಎಂದರು.

ಕಾಂಗ್ರೆಸ್ ಪಕ್ಷ ಯಾವಾಗಲೂ ಬದುಕಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಮಾಡುತ್ತದೆ. ಬೆಲೆ ಏರಿಕೆ, ಸ್ವಜನ ಪಕ್ಷಪಾತ, ಅಭಿವೃದ್ದಿ ಶೂನ್ಯ ಆಡಳಿತ ಕಂಡು ಜನ ಬೇಸತ್ತ ಸಮಯದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಭರವಸೆಗಳನ್ನು ನಂಬಿ ಮತ ನೀಡಿದರು. ಕೊಟ್ಟ ಮಾತು ತಪ್ಪದೆ ಐದೂ ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಅವರ ಸರ್ಕಾರ ಅನುಷ್ಠಾನ ಮಾಡಿದೆ. ಮೇಲು ಕೀಳಿಲ್ಲದೆ ಎಲ್ಲರಿಗೂ ಈ ಯೋಜನೆಗಳ ಅನುಕೂಲ ದೊರೆತಿದೆ ಎಂದರು.

ಬಿಎಂಟಿಸಿ‌ ಮಾಜಿ ಉಪಾಧ್ಯಕ್ಷ ಗೋವಿಂದರಾಜು, ಪುರಸಭಾ ಸದಸ್ಯ ಕೆ.ಎಂ.ಮೋಹನ್ ಕುಮಾರ್, ವಿಜಯ್, ಟೊಮೇಟೋ ಗೌಡ, ಕೆರೆಸಂತೆ ಸೋಮಶೇಖರ್, ಶ್ರೀಕಂಠ ಒಡೆಯರ್, ಕೆ.ಪಿ.ನಿರಜನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT