ಚಿಕ್ಕಮಗಳೂರು: ‘ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದ. 23 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಇದಕ್ಕೆಲ್ಲ ಕುಮಾರಸ್ವಾಮಿ ಕಾರಣವೇ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.

2006ರಲ್ಲಿ ಬಿಜೆಪಿಗೆ ‘ಲೈಫ್’ ಕೊಟ್ಟಿದ್ದಾಗಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ದೇಶ ಕಾಂಗ್ರೆಸ್ ಮುಕ್ತವಾಗಲಿದೆ ಎಂದು 2009ರಲ್ಲಿ ಮೋದಿ ಹೇಳಿದ್ದರು. ಪಂಜಾಬ್, ಅಲ್ಲಿ ಇಲ್ಲಿ ಸ್ವಲ್ಪ ಬಿಟ್ಟರೆ ಈಗ ಕಾಂಗ್ರೆಸ್ ಎಲ್ಲಿದೆ’ ಎಂದು ಕೇಳಿದರು.

‘ಕಾಂಗ್ರೆಸ್ ಒಡೆದ ಮನೆ. ಆ ಪಕ್ಷದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಗುಂಪುಗಳಿವೆ. ಈ ಮೂರು ಗಂಪುಗಳ ನಡುವೆ 24 ಗಂಟೆಯೂ ಗುದ್ದಾಟ ಇದ್ದೇ ಇರುತ್ತದೆ. ಅದರಿಂದಾಗಿಯೇ ಕಾಂಗ್ರೆಸ್ ನೆಲಕಚ್ಚಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.